Friday, 13th December 2024

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್’ರಿಗೂ ಕರೋನಾ ಪಾಸಿಟಿವ್

ಬೆಳಗಾವಿ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಿಗೂ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ  ಹೆಬ್ಬಾಳ್ಕರ್ ಅವರ ಕುಟುಂಬದ ಎಂಟು ಜನರಿಗೆ ಕರೋನಾ ಪಾಸಿಟವ್ ಎಂಬುದಾಗಿ ದೃಢಪಟ್ಟಿತ್ತು.

ಮಾಹಿತಿ ಹಂಚಿಕೊಂಡಿರುವ ಶಾಸಕಿ, ನಾನು ಹಾಗೂ‌ ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಕರೋನಾ ಸೋಂಕಿನಿಂದ ಹೋಂ ಕ್ವಾರಂಟೈನ್ ಆಗಿದ್ದು, ಆದಷ್ಟು ಬೇಗ ಗುಣಮುಖವಾಗಿ ಎಂದಿನಂತೆ ನಿಮ್ಮ ಜೊತೆ ಬೆರೆಯಲು ನಾನು‌ ಕಾತುರಳಾಗಿ ದ್ದೇನೆ.

ಕ್ಷೇತ್ರದಲ್ಲಿ ನೀವು ದೇವಸ್ಥಾನಗಳಿಗೆ ತೆರಳಿ ಪೂಜೆ, ಪುನಸ್ಕಾರಗಳ‌‌ ಮೂಲಕ ನನ್ನ ಹಾಗೂ ಸಹೋದರನ ಒಳಿತಿಗಾಗಿ ಹಾರೈಸು ತ್ತಿರುವುದು ನಮ್ಮ ಪೂರ್ವಜನ್ಮದ ಪುಣ್ಯವೆನಿಸುತ್ತಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಹಾರೈಕೆಗಳ ಮೂಲಕ ಆದಷ್ಟೂ ಬೇಗ ಕ್ಷೇತ್ರಕ್ಕೆ ಮರಳಿ ನಿಮ್ಮ ಜೊತೆ ಬೆರೆಯಲಿದ್ದೇನೆ ಹಾಗೂ ನಿಮ್ಮೆಲ್ಲರ ಹಾರೈಕೆಗಳಿಗೆ ನಾನೆಂದೂ ಚಿರಋಣಿ. ಹೃದಯಸ್ಪರ್ಶಿ ಧನ್ಯವಾದ ಎಂದಿದ್ದಾರೆ.