Thursday, 3rd October 2024

Munirathna : ಪೋಲೀಸ್‌ ಕಸ್ಟಡಿಯಲ್ಲಿರುವ ಶಾಸಕ ಮುನಿರತ್ನಗೆ ಎದೆನೋವು, ಜಯದೇವ ಆಸ್ಪತ್ರೆಗೆ ದಾಖಲು

Munirathna

ಬೆಂಗಳೂರು : ಗುತ್ತಿಗೆದಾರರಿಗೆ ಜೀವ ಬೆದರಿಕೆ ಒಡ್ಡಿರುವುದಲ್ಲದೆ ಜಾತಿ ನಿಂದನೆ ಮಾಡಿರುವ ಆರೋಪ ಹೊತ್ತಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಗೆ (Munirathna) ಸೋಮವಾರ ಸಂಜೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಅವರನ್ನು ಎರಡು ದಿನಗಳ ಕಸ್ಟಡಿಗೆ ಪಡೆಯಲಾಗಿತ್ತು. ಇದೀಗ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿದ್ದಾರೆ.

ಗುತ್ತಿಗೆದಾರನಿಗೆ ಬೆದಿರಿಕೆ ಒಡ್ಡಿರುವ ವಿಡಿಯೊ ವೈರಲ್ ಅದ ತಕ್ಷಣ ಅವರ ಮೇಲೆ ಕೇಸ್ ದಾಖಲಾಗಿತ್ತು. ಅವರನ್ನು ಕೊಲಾರದಿಂದ ವಶಕ್ಕೆ ಪಡೆದಿದ್ದ ಪೊಲೀಸರು ಬೆಂಗಳೂರಿಗೆ ಕರೆತಂದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ಅವರು ಹೃದಯದ ಬೇನೆ ಇರುವುದಾಗಿ ವೈದ್ಯರು ಪೊಲೀಸರಿಗೆ ಸೂಚಿಸಿದ್ದರು. ಇದೀಗ ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸರು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಮುನಿರತ್ನ ತಮಗೆ ಹೃದಯ ರೋಗ, ಹರ್ನಿಯಾ ಹಾಗೂ ಮಧುಮೇಹ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದರು. ಈ ವೇಳೆ ಜಡ್ಜ್‌ ತಪಾಸಣೆ ಮಾಡುವುದಕ್ಕೆ ಸೂಚನೆ ಕೊಟ್ಟಿದ್ದರು.

ಇದನ್ನೂ ಓದಿ: Ganeshotsava: ಗಣೇಶೋತ್ಸವದ ಮೂಲಕ ಬ್ರಿಟೀಷರ ಒಡೆದು ಆಳುವ ನೀತಿಗೆ ಸೆಡ್ಡು ಹೊಡೆ ದವರು ತಿಲಕರು- ನ್ಯಾ.ಎನ್.ಕುಮಾರ್ ಅಭಿಮತ

ಮುನಿರತ್ನ ಅವರಿಂದ ಬೆದರಿಕೆ ಕರೆ ಪಡೆದಿದ್ದ ಶಾಸಕ ಮುನಿರತ್ನಗೆ ಸಂಬಂಧಿಸಿದ ಇನ್ನೊಂದು ಆಡಿಯೊ ಬಿಡುಗಡೆ ಮಾಡುವುದಾಗಿ ಗುತ್ತಿಗೆದಾರ ಚೆಲುವರಾಜು ಅವರು ಸೋಮವಾರ ಹೇಳಿಕೆ ನೀಡಿದ್ದಾರೆ. ಹನುಮಂತರಾಯಪ್ಪ ಅವರ ಬಳಿ ಮಾತನಾಡಿರುವ ವಿಡಿಯೊ ಹಾಗೂ ಕಾಮಗಾರಿಯಲ್ಲಿ ಶೇಕಡಾ 30 ಕಮಿಷನ್ ಪಡೆಯುವ ಮಾಹಿತಿ ಈ ಆಡಿಯೊದಲ್ಲಿ ಇದೆ ಎಂದು ಅವರು ಹೇಳಿಕೊಂಡಿದ್ದರು.