Wednesday, 11th December 2024

ಕಾಂಗ್ರೆಸ್ ಆಡಳಿತ ದೇಶಕ್ಕೆ ಬೇಕು: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ಕಾಂಗ್ರೆಸ್ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೇನು ಮಾಡಿದೆ ಎಂಬು ದು ಮುಖ್ಯ ಈ ದೇಶದ ಸಾರ್ವಭೌಮತೆ ಅಖಂಡತೆಗೆ ಸರ್ವ ಜನಾಂಗವನ್ನು ಸರ್ವವಿಧ ದಲ್ಲಿ ಸಾಗಬೇಕಾದರೆ ಕಾಂಗ್ರೆಸ್ ಆಡಳಿತ ದೇಶಕ್ಕೆ ಬೇಕು ಎಂದು ಶಾಸಕ ಯಶವಂತ ರಾಯಗೌಡ ಪಾಟೀಲ ಹೇಳಿದರು.

ಇಂಡಿ ಬ್ಲಾಕ್ ಕಾಂಗ್ರೆಸ್ ,ಬಳ್ಳೋಳ್ಳಿ ಬ್ಲಾಂಕ್ ಕಾಂಗ್ರೆಸ್ ವಯಿಂದ ಹಮ್ಮಿಕೊಂಡ ಶಾಸಕ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ್ ವಿಜಯಯ ಸಾಧಿಸಿ ಮತಕ್ಷೇತ್ರಕ್ಕೆ ಆಗಮ ನದ ಹಿನ್ನಲೆಯಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನನ್ನ ಮನೆತನಕ್ಕೆ ಸಾಕಷ್ಟು ಗೌರವ ನೀಡಿದೆ ನಾನು ಸಚಿವನಾಗಬೇಕಾರದೆ ೨೦೧೩ರಲ್ಲಿಯೇ ಆಗುತ್ತಿದೆ. ನನ್ನ ಹಣೆಬರಹದಲ್ಲಿ ಇರಲ್ಲಿಕ್ಕಿಲ್ಲ ನನಗೆ ಸಚಿವ ಸ್ಥಾನ ಕ್ಕಿಂತ ಮತಕ್ಷೇತ್ರದ ಜನತೆ ಸುಮಾರು ೩೦ ವರ್ಷಗಳ ಸುಧೀರ್ಘ ರಾಜಕೀಯವಾಗಿ ಇಷ್ಟೋಂದು ಎತ್ತರಕ್ಕೆ ಬೆಳೆಸಿ ನಿಮ್ಮ ಹೃದಯಲ್ಲಿ ಇರಿಸಿದ್ದೀರಿ ನಿಮ್ಮ ಉಪಕಾರ ಜೀವನದ ಕೊನೆ ಉಸಿರು ಇರುವವರೆಗೂ ಮರೇಯುವುದಿಲ್ಲ ಇಂತಹ ಹೃದಯವಂತರ ಮತಕ್ಷೇತ್ರದಲ್ಲಿ ಹುಟ್ಟಿರುವುದು ಸೌಭಾಗ್ಯ.

ಕಾಂಗ್ರೆಸ್ ಪಕ್ಷ ನನ್ನ ಜೀವನದ ಉಸಿರು ಮಾತೃ ಪಕ್ಷಕ್ಕೆ ಮೋಸ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಬಗೆದಂತೆ ನನಗೆ ಸಚಿವ ಸ್ಥಾನ ಕೊಡುವುದು ಬೀಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಕ್ಷೇತ್ರದ ಜನತೆ ಕೈಮುಗಿದು ಕೇಳುತ್ತೇನೆ ಆತ್ಮಸ್ಥೆರ್ಯ ಕಳೇದುಕೊಳ್ಳಬೇಡಿ ಮಂತ್ರಿ ಮಂಡಲ ರಚನೆಯಲ್ಲಿ ಸಾಕಷ್ಟು ತೊಡಕುಗಳಿರುತ್ತವೆ. ನಮ್ಮಗಿಂತ ಹಿರಿಯರಾದ ಆರ್.ವ್ಹಿ ದೇಶಪಾಂಡೆ ಸಾಹೇಬ ರಂತಹವರು ಇದ್ದಾರೆ. ಪ್ರತಿ ಚುನಾವಣೆಗಳಲ್ಲಿ ಬೇರೆಯವರು ನಿಂತಾಗ ಬದ್ದತೆಯಿಂದ ಗೆಲ್ಲಿಸಿದ್ದೇನೆ.

ಸಾಕಷ್ಟು ಚುನಾವಣೆಗಳು ಬಂದಿವೆ ಮುಖ್ಯ ಮಂತ್ರಿ ಮಾಡುವಾಗ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಯಾರಿಗೆ ಮಂತ್ರಿ, ಯಾರಿಗೆ ಸಚಿವ ಮಾಡಬೇಕು ಮಾಡಿದ್ದೇನೆ ಉಪಕಾರ ಸ್ಮರಣೆ ಇರಬೇಕು. ಅಧಿಕಾರ ಆಶೇ ಪಡುವ ವ್ಯಕ್ತಿ ನಾನಲ್ಲ ಕಳೆದ ಬಾರಿ ಗಿಂತ ಈ ಅವಧಿಯಲ್ಲಿ ೫ ಸಾವಿರ ಕೋಟಿ ಅನುಧಾನ ತಂದು ವಿಜಯಪೂರ ಜಿಲ್ಲೆಯ ೮ ಮತಕ್ಷೇತ್ರಗಳಲ್ಲಿಯೇ ನನ್ನ ಮತಕ್ಷೇತ್ರ ಸರ್ವವಿಧದದಲ್ಲಿ ಸುಧಾರಣೆ ಮಾಡುತ್ತೇನೆ. ರಾಜಕಾರಣ ಬರುತ್ತದೆ ಹೋಗುತ್ತದೆ. ಚುನಾವಣೆಯಲ್ಲಿ ಅನೇಕ ನಾಯಕರು ನನಗೆ ಬೈಯಿದಿದ್ದಾರೆ ಇದು ಒಳ್ಳೇಯ ಲಕ್ಷಣವಲ್ಲ ನಾನು ಸಕ್ಕರೆ ಕಾರ್ಖಾನೆ ಕಟ್ಟಿದ್ದೇನೆ ನೀವು ಮತ್ತೋಂದು ಕಟ್ಟುತ್ತೇನೆ ಇವರಿಗಿಂತ ಹತ್ತು ಪಟ್ಟು ಅಭಿವೃದ್ದಿ ಮಾಡುತ್ತೇನೆ ಎಂದು ಮಾತನಾಡಬೇಕಾಗಿತ್ತು ವಯಕ್ತಿಕ ತೇಜೋವಧೆ ತರವಲ್ಲ ನಿವು ಬೈಯ್ದುದರಿಂದ್ದ ಮತ್ತಷ್ಟು ಜನರು ನನ್ನಪರವಾಗಿ ಮತ ಹಾಕಿದ್ದಾರೆ. ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಜೂ.೧ ರಂದು ೫ ಗ್ಯಾರಂಟಿ ಇಡೇರಿಸಿ ಕೊಟ್ಟ ಮಾತಿಗೆ ಬದ್ದತೆಯಿಂದ ನಡೆಯುತ್ತೇವೆ.

ಪ್ರತಿ ಚುನಾವಣೆಯಲ್ಲಿ ಜಾತಿ ರಾಜಕಾರಣ ಮಾಡುವುದು ಒಳ್ಳೇಯದಲ್ಲ ಸರ್ವಜನಾಂಗದ ಮನಸ್ಸು ಗೆಲ್ಲಬೇಕು ಈ ಚುನಾವಣೆ ಹೃದಯವಂತರು ನೀತಿವಂತರು ನನಗೆ ಮತ ನೀಡಿ ಆರ್ಶೀವಾದ ಮಾಡಿದ್ದಾರೆ. ೨೦೨೩ರ ಚುನಾವಣೆಯಲ್ಲಿ ನನಗೆ ಅಭೂತ ಪೂರ್ವ ಮತ ನೀಡಿ ಆರ್ಶೀವಾದ ಮಾಡಿದ ಇಂಡಿ ಮತಕ್ಷೇತ್ರದ ಜನತೆಗೆ ಹಾಗೂ ಪರೋಕ್ಷವಾಗಿ ಅಪರೋಕ್ಷವಾಗಿ ಸಹಾಯ ಸಹಕಾರ ಮಾಡಿದ ಹೃದಯವಂತ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬಿ.ಎಂ ಕೋರೆ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಧನರಾಜ ಮುಜಗೊಂಡ ,ಶೇಖರ ನಾಯಕ, ಗುರುಣಗೌಡ ಪಾಟೀಲ ಎಂ.ಆರ್ ಪಾಟೀಲ, ಮಹಾದೇವ ಗಡ್ಡದ, ರುಕ್ಮೂದಿನ ತದ್ದೇವಾಡಿ, ಧರ್ಮುರಾಜ ವಾಲೀಕಾರ, ಮಲ್ಲಿಕಾರ್ಜುನ ಲೋಣಿ, ಜಾವಿದ .ಮಹಿಬೂಬ ಅರಬ, ಹರೀಶಚಂದ್ರ ಪವಾರ, ಮೂಮಿನ, ಇಲಿಯಾಸ ಬೋರಾಮಣಿ, ನಿರ್ಮಲಾ ತಳಕೇರಿ, ಕಲ್ಲನಗೌಡ ಬಿರಾದಾರ, ಬಾಬುಸಾಹುಕಾರ ಮೇತ್ರಿ, ಸೋಮುಶೇಖರ ಮ್ಯಾಕೇರಿ, ಆನಂದಪ್ಪ ದೇಸಾಯಿ,ಜಟ್ಟೆಪ್ಪ ಮರಡಿ, ಮಲ್ಲನಗೌಡ ಪಾಟೀಲ. ಜೀತಪ್ಪ ಕಲ್ಯಾಣಿ, ಭೀಮಣ್ಣಾ ಕೌಲಗಿ ಸೇರಿದಂತೆ ಅನೇಕರಿದ್ದರು.

ಬಾಕ್ಸ: ಮುಂಬರುವ ದಿನಗಳಲ್ಲಿ ತಾಲೂಕಿನ ರಸ್ತೆಗಳ ಸುಧಾರಣೆ ಮಾಡುವುದರೊಂದಿಗೆ ಯುವ ಪಿಳಿಗೆಯ ಉದ್ಯೋಗಕ್ಕಾಗಿ ಕೈಕಾರಿಕೆಗಳ ಸ್ಥಾಪನೆ. ಶೈಕ್ಷಣಿಕ ಪ್ರತಿಯಿಂದ ಎನ್ನೇಲ್ಲಾ ಸುಧಾರಣೆ ಸಾಧ್ಯ ಎಂಬ ವಿಚಾರದಿಂದ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿ ಮತಕ್ಷೇತ್ರ ಶಿಕ್ಷಣ ಕಾಶಿ ಮಾಡಿ ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಅಭಿವೃದ್ದಿ ಮಾಡುತ್ತೇನೆ. ಸಚಿವ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ದಿ ಮುಖ್ಯ ವರಿಷ್ಠರಿಗೆ ಅಭಿವೃದ್ದಿಯ ವಿಚಾರವಾಗಿ ಮಾತನಾಡಿದ್ದೇನೆ ಹಿಂದಿಗಿ0ತ ಸುಮಾರು ೫ ಸಾವಿಉರ ಕೋಟಿಗಿಂತ ಅಧಿಕ ಅನುಧಾನ ತರುವಂದರೊ0ದಿಗೆ ತಾಲೂಕಾ ಜಿಲ್ಲೆ ಮಾಡುತ್ತೇನೆ ಮಾಡದಿದ್ದರೆ ೨೦೨೮ರ ಚುನಾವಣೆ ನಿಲ್ಲುವುದಿಲ್ಲ ಎಂದು ಶ್ರೀಶಾಂತೇಶ್ವರ ದೇವರ ಮೇಲೆ ಸಿದ್ದಲಿಂಗನ ಮೇಲೆ ಪ್ರಮಾಣ ಮಾಡಿದರು.