ಇಂಡಿ: ಸರಕಾರಿ ಪ್ರೌಢಶಾಲೆ ಇಂಡಿ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಿರಾದಾರ ನಿವೃತ್ತಿ ನಂತರ ಅವರ ಗೆಳೆಯರ ಬಳಗದ ವತಿಯಿಂದ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷ ,ಸಾಹಿತಿ ಡಾ. ಕಾಂತು ಇಂಡಿ ಮಾತನಾಡಿ ಎಂ.ಪಿ ಬಿರಾದಾರ ತಾಲೂಕಿನಲ್ಲಿ ಒಬ್ಬ ಹಿರಿಯ ಸಹೋದರಂತೆ ಇದ್ದು ಸೇವಾ ಅವಧಿಯಲ್ಲಿ ಅನೇಕ ಶಿಕ್ಷಕ ಬಳಗಕ್ಕೆ ಒಳ್ಳೆಯ ಸ್ನೇಹಿತರಾಗಿ, ಹಿತೈಸಿಗಳಾಗಿ ಮಾರ್ಗದರ್ಶಿಗಳಾಗಿದ್ದರು.
ಕಸಾಪ ಪ್ರತಿಯೊಂದು ಚಟುವಟಿಕೆಗಳಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಇವರು ಅತ್ಯಂತ ಮುಗ್ದ ಸರಳ ಸ್ವಭಾವ ವ್ಯಕ್ತಿಗಳಾಗಿದ್ದು ಯಾರಿಗೂ ಕಿಂಚ್ಚಿತ್ತೂ ನೋವನ್ನುಂಟ್ಟು ಮಾಡದೆ ಸೇವೆಯ ಕೊನೆಯವರೆಗೂ ಸರಳ ಜೀವನ ಸಾಗಿಸಿದ್ದಾರೆ. ಸಮಯಕ್ಕೆ ಹೆಚ್ಚು ಮಹತ್ವ ನೀಡುವ ಇವರು ಮಕ್ಕಳ ಸೇವೆಯೇ ದೇವರ ಸೇವೆ ಎಂಬ ನಂಬಿಕೆ ಇವರಲ್ಲಿತ್ತು. ಸರಕಾರಿ ಪ್ರೌಢ ಶಾಲೆಗೆ ಮುಖ್ಯೋ ಪಾಧ್ಯಾಯರಾಗಿ ಬಂದ ನಂತರ ವಿಧ್ಯಾರ್ಥಿಗಳ ಸಂಖ್ಯೆ ಗಣನಿಯವಾಗಿ ಹೆಚ್ಚಳ ಮಾಡಿದ್ದಾರೆ.
ಅಷ್ಟೇ ಅಲ್ಲದೆ ವಿಧ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆ ಸಹಪಠ್ಯೆ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿ ರಾಜ್ಯ ಮಟ್ಟದಲ್ಲಿ ವಿಧ್ಯಾರ್ಥಿಗಳು ಪ್ರಶೇಸ್ತಿ ಪಡೆಯಲು ಎಂ.ಪಿ ಬಿರಾದಾರ ಕಾರಣರಾಗಿದ್ದಾರೆ. ಇವರು ಸೇವೆ ಸಲ್ಲಿಸುವಾಗಿನಿಂದ ಇಲ್ಲಿಯವರೆಗೆ ಶಿಕ್ಷಕ ಸ್ನೇಹಿತರೊಂದಿಗೆ ಒಳ್ಳೆಯ ಬಾಂಧವ್ಯ ದೊ0ದಿಗೆ ಎಸ್.ಎಸ್ .ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಲು ಪ್ರೇರಣೆ ನೀಡಿದ್ದಾರೆ.
ಸೇವೆಯಿಂದ ನಿವೃತ್ತಿಯಾದರೂ ಕೂಡಾ ಇವರ ಸೇವೆ ಸಮಾಜಕ್ಕಾಗಿ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ರಮಾಬಾಯಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ನಿಜಣ್ಣಾ ಕಾಳೆ, ಶಿಕ್ಷಕ ಜಿ.ಜಿ ಬರಡೋಲ, ಎಸ್.ಎಸ್ ತೆಲ್ಲೂರ, ಶಂಕರ ರಾವೋರ, ಶಾಂತಗೌಡ ರೂಗಿ ಜಂಟಿಯಾಗಿ ಸನ್ಮಾನಿಸಿ. ನೆನಪಿನ ಕಾಣಿಕೆ ನೀಡಿದರು.