Friday, 13th December 2024

Munirathna: ಮುನಿರತ್ನಗೆ ಇನ್ನೊಂದು ಸಂಕಷ್ಟ, ಲೈಂಗಿಕ ಕಿರುಕುಳ ದೂರು ದಾಖಲು

MLA Munirathna

ರಾಮನಗರ: ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿನಿಂದನೆ ಮಾಡಿರುವ ಕೇಸ್‌ನಲ್ಲಿ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ (BJP MLA Munirathna) ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಲೈಂಗಿಕ ಕಿರುಕುಳ (Physical Abuse) ಆರೋಪದಡಿ ದೂರು ದಾಖಲಿಸಿದ್ದಾರೆ.

ರಾಮನಗರ (Ramanagara news) ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಆರ್‌ ಆರ್‌ ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪದಡಿ ಎಫ್​ಐಆರ್ ದಾಖಲಾಗಿದೆ. ಡಿವೈಎಸ್‌ಪಿ ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಹಾಜರಾಗಿ ಸಂತ್ರಸ್ತೆ 2 ಗಂಟೆಗೂ ಹೆಚ್ಚು ಕಾಲ ವಿವರಣೆ ನೀಡಿದ್ದಾರೆ. ಇಂದು ಸಂತ್ರಸ್ತೆ ಜೊತೆ ಪೊಲೀಸರು ಸ್ಥಳಮಹಜರು ನಡೆಸಲಿದ್ದಾರೆ.

ಘಟನೆ ಸಂಬಂಧ ಶಾಸಕ ಮುನಿರತ್ನ ಸೇರಿ 7 ಜನರ ವಿರುದ್ಧ FIR ದಾಖಲಾಗಿದೆ. ಆರ್​.ಆರ್​.ನಗರ ಬಿಜೆಪಿ ಶಾಸಕ ಮುನಿರತ್ನ, ವಿಜಯ್​ ಕುಮಾರ್​, ಕಿರಣ್​​, ಲೋಹಿತ್​​, ಮಂಜುನಾಥ್​, ಲೋಕಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಖಾಸಗಿ ರೆಸಾರ್ಟ್​ನಲ್ಲಿ ಅತ್ಯಾಚಾರ ಮಾಡಿರುವುದಾಗಿ DySP ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಮಹಿಳೆ ಆರೋಪ ಮಾಡಿ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಜೀವ ಬೆದರಿಕೆ ಮತ್ತು ಜಾತಿನಿಂದನೆ ಕೇಸ್‌ನಲ್ಲಿ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರ ವಿರುದ್ಧ ಒಕ್ಕಲಿಗ, ದಲಿತ ಸಂಘಟನೆಗಳು ಸರಣಿ ಪ್ರತಿಭಟನೆ ಮಾಡುತ್ತಿವೆ. ವಿಚಾರಣಾಧೀನ ಕೈದಿಯಾಗಿರುವ ಮುನಿರತ್ನಗೆ ಗುತ್ತಿಗೆದಾರ ಚಲುವರಾಜು ದಾಖಲಿಸಿದ್ದ ವಂಚನೆ ಪ್ರಕರಣದಲ್ಲಿ ತುಸು ರಿಲೀಫ್ ಸಿಕ್ಕಿದ್ದು, ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದರೆ ಜಾತಿ ನಿಂದನೆ ಕೇಸ್‌ನಲ್ಲಿ ಬಿಜೆಪಿ ಶಾಸಕ ಮುನಿರತ್ನ ಸಲ್ಲಿಸಿರುವ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕೋರ್ಟ್‌ನಲ್ಲಿ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶ ಕಾಯ್ದಿರಿಸಿದ್ದು, ಇಂದು ಆದೇಶ ಪ್ರಕಟಿಸಲಿದೆ.

ಇದನ್ನೂ ಓದಿ: MLA Munirathna_Vokkaliga: ಮುನಿರತ್ನ ವಿರುದ್ಧ ಒಕ್ಕಲಿಗರ ಮುನಿಸು