Wednesday, 11th December 2024

Murder case: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಚಾಕುವಿನಿಂದ ಇರಿದು ತಾಯಿಯನ್ನೇ ಕೊಂದ ಪಾಪಿ ಮಗ!

Murder case

ಬೆಂಗಳೂರು: ಕೆಲಸಕ್ಕೆ ಹೋಗು ಎಂದಿದ್ದಾಕ್ಕೆ ಮಗನೊಬ್ಬ ಚಾಕುವಿನಿಂದ ಇರಿದು ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ (Murder case) ರಾಜಧಾನಿಯಲ್ಲಿ ನಡೆದಿದೆ. ಆಯೇಷಾ (53) ಕೊಲೆಯಾದವರು. ಮಗ ಸೂಫಿಯಾನ್ (32) ಆರೋಪಿಯಾಗಿದ್ದಾನೆ.

ಬೆಂಗಳೂರಿನ ಶ್ರೀಕಂಠೇಶ್ವರ ಲೇಔಟ್‌ನ ಮನೆಯಲ್ಲಿ ಘಟನೆ ನಡೆದಿದೆ. ಆಯೇಷಾ ಪತಿ ಮೃತಪಟ್ಟಿದ್ದು, ಸದ್ಯ ಅವರು ಇಬ್ಬರ ಮಕ್ಕಳ ಜತೆಗೆ ವಾಸಿಸುತ್ತಿದ್ದರು. ಪುತ್ರ ಸೂಫಿಯಾನ್‌ನನ್ನು ಕೆಲಸಕ್ಕೆ ಹೋಗು ಎಂದಿದ್ದಾರೆ. ಇದರಿಂದ ಕೋಪಗೊಂಡ ಪುತ್ರ ತಾಯಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಸೂಫಿಯಾನ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆಯೇಷಾ ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Actor Darshan: ಜೀವ ಇರೋವರೆಗೂ ನಟ ದರ್ಶನ್ ನನ್ನ ಮಗನೇ ಎಂದ ಸುಮಲತಾ ಅಂಬರೀಶ್‌

ಭೀಕರ ರಸ್ತೆ ಅಪಘಾತ, ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಶಿವಮೊಗ್ಗ: ವೇಗವಾಗಿ ಚಲಾಯಿಸುತ್ತಿದ್ದ ಬೈಕ್‌ ಸ್ಕಿಡ್‌ (Bike Skid) ಆದ ಪರಿಣಾಮ (Road accident) ಇಬ್ಬರು ವಿದ್ಯಾರ್ಥಿಗಳು (Students) ಸಾವನ್ನಪ್ಪಿರುವ ಘಟನೆ ಶಿವಮೊಗ್ಗ (Shivamogga news) ಹೊರವಲಯದ ಹರಕೆರೆ ಬಳಿಯ ಕಾನೆಹಳ್ಳ ಬಳಿ ನಡೆದಿದೆ.

ಮೃತ ವಿದ್ಯಾರ್ಥಿಗಳನ್ನು ನಿಸಾರ್ (20) ಮತ್ತು ಯಶವಂತ್ (20) ಎಂದು ಗುರುತಿಸಲಾಗಿದೆ. ಬೈಕ್ ಮೇಲೆ ಇಬ್ಬರೂ ವಿದ್ಯಾರ್ಥಿಗಳು ವೇಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿದೆ. ಕೆಟಿಎಂ ಬೈಕ್‌ನಲ್ಲಿ ವೇಗವಾಗಿ ಹೋಗುವಾಗ ನಿಯಂತ್ರಣಕ್ಕೆ ಸಿಗದೇ ಈ ಅಪಘಾತ ಸಂಭವಿಸಿದ್ದು, ಮರಗಳು ಹಾಗೂ ಕಲ್ಲು ಬಂಡೆಗಳಿಗೆ ತಾಗಿ ಇಬ್ಬರೂ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ ಇಬ್ಬರು ಎಂದಿನಂತೆ ಕಾಲೇಜಿಗೆ ತೆರಳುವಾಗ ಈ ಅಪಘಾತ ಸಂಭವಿಸಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ. ಕಾನೇಹಳ್ಳದ ಕ್ರಾಸ್ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಜಾಹೀರಾತಿನ ಹ್ಯಾಂಗರ್ ಕಂಬಕ್ಕೆ ಗುದ್ದಿದೆ. ಘಟನೆ ಕುರಿತಂತೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ಕುಕ್ಕೆ ಸುಬ್ರಹ್ಮಣ್ಯದಿಂದ ಮರಳುತ್ತಿದ್ದ ದಂಪತಿ ಅಪಘಾತದಲ್ಲಿ ಬಲಿ, ಮಕ್ಕಳು ಅನಾಥ