Thursday, 12th December 2024

My Hero Movie: ಅವಿನಾಶ್ ವಿಜಯಕುಮಾರ್ ನಿರ್ದೇಶನದ ʼಮೈ ಹೀರೋʼ ಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ

My Hero Movie

ಬೆಂಗಳೂರು: ಎ.ವಿ. ಸ್ಟುಡಿಯೋಸ್ ಲಾಂಛನದಲ್ಲಿ ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ ʼಮೈ ಹೀರೊʼ ಚಿತ್ರ (My Hero Movie) ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲದೇ ಪ್ರಪಂಚದ ಪ್ರಸಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ʼಮೈ ಹೀರೋʼ ಚಿತ್ರ ಪ್ರದರ್ಶನವಾಗಿದೆ. ಚಿತ್ರಕ್ಕೆ ಈವರೆಗೂ ಪ್ರದರ್ಶನವಾಗಿರುವ ಎಲ್ಲಾ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರಶಂಸೆಯ ಜತೆಗೆ ಪ್ರಶಸ್ತಿ ಕೂಡ ದೊರಕಿರುವುದು ಚಿತ್ರತಂಡದವರಲ್ಲಿ ಸಂತಸ ಮನ ಮಾಡಿದೆ.

ಟೋಕಿಯೋ ಇಂಟರ್‌ನ್ಯಾಷನಲ್ ಸಿನಿಮಾ ಅವಾರ್ಡ್ಸ್ 2024, ಸ್ಯಾನ್ ಡಿಯ್ಗೊ ಇಂಡಿಪೆಂಡೆಂಟ್ ಸಿನಿಮಾ ಅವಾರ್ಡ್ಸ್ (ಇಂಡಿಯನ್ ಸಿನಿಮಾ), MIAFF 2024 (ಬೆಸ್ಟ್ ನರೇಟಿವ್ ಫ್ಯೂಚರ್ ಫಿಲ್ಮ್ ಹಾಗೂ ಬೆಸ್ಟ್ ಡೈರೆಕ್ಟರ್), ನ್ಯೂಯಾರ್ಕ್ ಫಿಲಂ & ಸಿನಿಮೆಟೊಗ್ರಾಫಿ ಅವಾರ್ಡ್ 2024, ಸ್ವಿಡನ್ ಫಿಲಂ ಅವಾರ್ಡ್ಸ್‌ನಲ್ಲಿ ಬೆಸ್ಟ್ ಫ್ಯೂಚರ್ ಫಿಲಂ, ಬ್ಯಾಂಗ್ ಕಾಕ್ ಮೂವೀ ಅವಾರ್ಡ್ಸ್‌ನಲ್ಲಿ ನಿರ್ದೇಶಕರಿಗೆ ಬೆಸ್ಟ್ ಮೂವೀ‌ ಮೇಕರ್‌ ಹಾಗೂ ವೆಸ್ಟರ್ನ್ ಕೆನಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್ಸ್‌ನಲ್ಲಿ ಉತ್ತಮ ಚಿತ್ರ ಹಾಗೂ ಉತ್ತಮ‌ ನಿರ್ದೇಶಕ ಪ್ರಶಸ್ತಿ ದೊರಕಿದೆ. ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮಾತ್ರವಲ್ಲದೇ ಮುಂದೆ ಕೂಡ ಪ್ರಪಂಚದ ಹೆಸರಾಂತ ಚಲನಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಲಿದೆ. ನಮ್ಮ ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ & ನಿರ್ದೇಶಕ ಅವಿನಾಶ್ ವಿಜಯಕುಮಾರ್.

ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದತ್ತಣ್ಣ, ಪ್ರಕಾಶ್ ಬೆಳವಾಡಿ, ಎರಿಕ್ ರಾಬರ್ಟ, ನಿರಂಜನ್ ದೇಶಪಾಂಡೆ, ಅಂಕಿತ ಅಮರ್, ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ | Quirk Dress Fashion: ಯುವ ಜನತೆಯನ್ನು ಆಕರ್ಷಿಸುತ್ತಿದೆ ಫಂಕಿ ಕ್ವಿರ್ಕ್ ಫ್ಯಾಷನ್!

ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣ ʼಮೈ ಹೀರೊʼ ಚಿತ್ರಕ್ಕಿದ್ದು, ಅವಿನಾಶ್ ವಿಜಯಕುಮಾರ್ ಅವರೆ ಸಂಭಾಷಣೆ ಬರೆದಿದ್ದಾರೆ.