Friday, 13th December 2024

ನಾಡಗೀತೆ ಹಾಡುವ ಸಮಯದ ಮಿತಿ 2.14 ಸೆಕೆಂಡ್

ಬೆಂಗಳೂರು : ಕನ್ನಡಿಗರ ದಶಕಗಳ ಕಾಲದ ಒತ್ತಾಯಕ್ಕೆ ಮಣಿದು ನಾಡಗೀತೆ ಹಾಡುವ ಸಮಯದ ಮಿತಿಯನ್ನು 2.14 ಸೆಕೆಂಡ್ ಗಳಿಗೆ ಸೀಮಿತಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತಿಮ ನಿರ್ಧಾರ ಕೈಗೊಂಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು, ನಾಡಗೀತೆ ರಾಗ ಸಂಯೋಜನೆ ಹಾಗೂ ಸಮಯದ ಮಿತಿ ಯನ್ನು ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಒಪ್ಪಿಗೆಗೆ ಕಳುಹಿಸಲಾಗಿದೆ. ಒಂದೆರಡು ದಿನಗಳಲ್ಲಿ ಅಂತಿಮ ಆದೇಶ ಹೊರ ಬೀಳಲಿದೆ ಎಂದು ತಿಳಿಸಿದರು.

ಹಲವು ವರ್ಷಗಳಿಂದ ನಾಡಗೀತೆಯ ರಾಗ ಸಂಯೋಜನೆ, ಸಮಯ ಮಿತಿ ಬಗ್ಗೆ ಹಲವು ಸಮಿತಿಗಳು ವರದಿಗಳನ್ನು ನೀಡಿದ್ದವು. ನಮ್ಮ ಸರ್ಕಾರ ಮೈಸೂರು ಲೀಲಾವತಿ ಹಾಗೂ ಸಾಹಿತಿ ದೊಡ್ಡರಂಗೇಗೌಡ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ವರದಿ ನೀಡಿದೆ. ಅದರ ಅನುಸಾರವಾಗಿ 2.14 ಸೆಕೆಂಡ್ ಗಳಿಗೆ ನಾಡಗೀತೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಸಿಎಂ ಅಂತಿಮಗೊಳಿಸಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂದರು.