ಇಂಡಿ: ಮನುಷ್ಯನ ಸೌಂದರ್ಯ ಶೈಕ್ಷಣಿಕ ವಿಕಾಸದಲ್ಲಿ ಕಾಣಬಹುದು. ಶಿಕ್ಷಣ ಆಭರಣವಿದ್ದಂತೆ .ವಿಧ್ಯಾರ್ಥಿಗಳಿಗೆ ಶಿಕ್ಷಣ ಜಾಗೃತಿ ಶೈಕ್ಷಣಿಕ ಸೌಲಭ್ಯದ ಜೊತೆಗೆ ಶಿಕ್ಷಣ ಜಾಗೃತಿ ಅರಿವು ಅಗತ್ಯ ಎಂದು ತಹಶೀಲ್ದಾರ ನಾಗಯ್ಯಾ ಹಿರೇಮಠ ಹೇಳಿದರು.
ಅವರು ಪಟ್ಟಣದ ಶಂಕರ ಪಾರ್ವತಿ ಭವನದಲ್ಲಿ ಬುದುವಾರ ಇಂಡಿ ತಾಲೂಕಾ ದಲಿತ ಸಮನ್ವಯ ಸಮಿತಿ ಆಯೋಜಿಸಿದ ಶೈಕ್ಷಣಿಕ ಜಾಗೃತಿ ಮತ್ತು ಸಾವಿತ್ರಿ ಬಾಯಿ ಫುಲೆಯವರ ಜೀವನ ಚರಿತ್ರೆ ಪುಸ್ತಕ ವಿತರಣಾ ಸಮಾರಂಭವನ್ನು ತಹಶೀಲ್ದಾರ ಉದ್ಘಾಟಿಸಿ ಮಾತನಾಡಿ ಸರಕಾರ ವಿಧ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬೆಳೆಯಲು ಸಾಕಷ್ಟು ಅನುಕೂಲ ಕಲ್ಪಿಸಿದೆ.
ಅವುಗಳ ಸದುಪಯೋಗಕ್ಕಾಗಿ ವಿಧ್ಯಾಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಕೂಡಾ ಮೂಡಿಸಬೇಕಾ ಗಿದೆ. ಇತೀಚಿನ ದಿನಗಳಲ್ಲಿ ವಿಧ್ಯಾರ್ಥಿ ಗಳಲ್ಲಿ ಮೋಬಾಯಿಲ್ ಬಳಕೆ ಹೆಚ್ಚಾಗಿ ಗೀಳು ಅಂಟಿಕೊ0ಡಿದೆ. ಮೋಬಾಯಿಲ್‌ಗಳಿಂದ ವಿಧ್ಯಾರ್ಥಿಗಳು ಹಾಳಾಗುತ್ತಿದ್ದು ಅಭ್ಯಾಸದ ಕಡೆ ಒಲವು ತೋರಿಸುತ್ತಿಲ್ಲ. ಶೈಕ್ಷಣಿಕ ಜಾಗೃತಿಯಂತಹ ಕಾರ್ಯಕ್ರಮಗಳು ಇಂದು ಅಗತ್ಯ ವಾಗಿದೆ. ಮಕ್ಕಳಿಗೆ ಸಾವಿತ್ರಿಬಾಯ ಫುಲೆ ಜೀವನ ಕುರಿತು ಪುಸ್ತಗಳನ್ನು ವಿತರಣೆ ಮಾಡಿರು ವುದು ಹೆಮ್ಮೇಯ ಸಂಗತಿ. ಈ ಕುರಿತು ದಲಿತ ಸಮನ್ವಯ ಸಮಿತಿ ತಾಲೂಕಾ ಘಟಕ ಅಧ್ಯಕ್ಷ ಶಿವಾನಂದ ಮೂರಮನ್ ಶೈಕ್ಷಣಿಕ ಅರಿವು ಮೂಡಿಸುತ್ತಿರುವುದು ಶ್ಲಾö್ಯಗನೀಯ ವಾಗಿದೆ ಎಂದರು.
ತಾ.ಪಂ ಅಧಿಕಾರಿ ಸುನೀಲ ಮದ್ದಿನ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ ಇಂಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ದರು.
ರಾಜ್ಯ ಡಿ.ಎಸ್.ಎಸ್ ಸಂಚಾಲಕ ಅಡಿವೆಪ್ಪ ಸಾಲಗಲ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಣ, ಸಂಘಟನೆ ಹೋರಾಟ ಡಾ.ಬಿ.ಆರ್ ಅಂಬೇಡ್ಕರವರು ಹೇಳಿರುವ ಹಾಗೆ ನಾವು ಮೋದಲು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣ ಒಂದು ದಿವ್ಯ ಔಷಧಿ ಇದ್ದಂತೆ ಜೀವನದ ಬದುಕಿನ ಪಾಠ ಕಲಿಸುತ್ತದೆ. ಬಾಬಾಸಾಹೇಬ ಅಂಬೇಡ್ಕರವರು ಬಾಲ್ಯದ ಶಿಕ್ಷಣ ಪಡೇಯುವ ದಿನಗಳಲ್ಲಿ ಅನೇಕ ಅಪಮಾನಗಳು ,ಕಹಿ ಅನುಭವಗಳು ನೋವು ನಲಿವು ಕಂಡರು. ಕಹಿಯನ್ನು ಉಂಡು ಸಮಾಜಕ್ಕೆ, ದೇಶಕ್ಕೆ ಸಹಿ ನೀಡಿದ ಮಹಾನ್ ದಾರ್ಶನಿಕ ಪುರುಷ. ಇಂದು ಸರಕಾರಗಳು ವಿಧ್ಯಾರ್ಥಿಗಳ ಕಲಿಕೆಗೆ ಸಾಕಷ್ಟ ಯೋಜನೆಗಳಿದ್ದು ಸದುಪಯೋಗ ಪಡೇಯಬೇಕು ಎಂದರು.
ದಲಿತ ಸಮನ್ವಯ ಸಮಿತಿ ತಾಲೂಕಾ ಘಟಕ ಅಧ್ಯಕ್ಷ ಶಿವಾನಂದ ಮೂರಮನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಎಸ್ ಲಕ್ಷಿö್ಮÃಶ ,ಶಿಕ್ಷಕಿ ಸಾವಿತ್ರಿ ಬಿರಾದಾರ, ನಿಲಯಮೇಲ್ವೀಚಾರಕಿ ಯಶೋಧಾ ಕುಕನೂರ, ದಲಿತ ಮುಖಂಡ ಸಂಜೀವ ತೋವಿ ಸೇರಿದಂತೆ ಅನೇಕ ಮುಖಂಡರು ಹಾಗೂ ದಲಿತ ಸಮನ್ವಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಲಿತ ಸಮನ್ವಯ ಸಮಿತಿ ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ್ ಹಾಗೂ ವೇದಿಕೆಯ ಗಣ್ಯರು ಸುಮಾರು ಎರಡುನೂರು ವಿಧ್ಯಾರ್ಥಿಗಳಿಗೆ ಸಾವಿತ್ರಿಬಾಯಿ ಫುಲೆಯವರ ಜೀವನ ಆಧಾರಿತ ಪುಸ್ತಕ ವಿತರಣೆ ಮಾಡಿದರು.