ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಗ್ರೇಡ್-೨ ತಹಸೀ ಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ತಾ.ಅಧ್ಯಕ್ಷ ಮೌನೇಶ ನಾಯಕ ಮ್ಯಾಕಲ್ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವಾಲ್ಮೀಕಿ ಸಮುದಾಯಕ್ಕೆ ಶೇ ೩ರಿಂದ ಶೇ ೭.೫ರಷ್ಟು ಮೀಸಲಾತಿ ಹೆಚ್ಚಳ ಅವಶ್ಯವಾಗಿರುವುದರಿಂದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಜಾರಿಗೆÉ ತರುವುದರ ಕುರಿತು ನಿರ್ಧರ ತೇಗೆದು ಕೊಳ್ಳಬೇಕು ಹಾಗೂ ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ೨೦೧೦ರಲ್ಲಿ ಸರಕಾರವು ಅನುದಾನ ವನ್ನು ನಿಗದಿಪಡಿಸಿದರು.
ಸ್ಥಳವನ್ನು ಗುರುತಿಸಲು ತಾಲ್ಲೂಕು ಆಡಳಿತ ವಿಫಲವಾಗಿರುವುದರಿಂದ ಕೂಡಲೇ ಪಟ್ಟಣದ ಮುಖ್ಯ ಭಾಗದಲ್ಲಿ ಸ್ಥಳವನ್ನು ಗುರುತಿಸಬೇಕು ಹಾಗೂ ಸುಸಜ್ಜಿತವಾದ ಭವ್ಯವಾದ ಕಟ್ಟಡ ನಿರ್ಮಾಣ ಯೋಜನೆಗೆ ಅನುದಾನ ವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ವಿಭಾಗಿಯ ಸಂ.ಕಾರ್ಯದರ್ಶಿ ಬುಡ್ಡಪ್ಪ ನಾಯಕ ಮಾತನಾಡಿದರು ಸಮಾಜದ ಮುಖಂಡರಾದ ಈರೇಶ ನಾಯಕ, ಚಿದಾನಂದಸ್ವಾಮಿ,ಹುಲಿಗೆಪ್ಪ ನಾಯಕ,ಬಸನಗೌಡ,ಹನುಮೇಶ ನಾಯಕ,ಅಯ್ಯಪ್ಪ ನಾಯಕ,ಅಮರೇಶ ನಾಯಕ, ಗುಂಡಪ್ಪ ನಾಯಕ, ಬಸವರಾಜನಾಯಕ,ದೇವರಾಜನಾಯಕ, ನರಸಿಂಹ ನಾಯಕ, ನಾಗರಾಜ ನಾಯಕ,ಹನುಮಪ್ಪ ನಾಯಕ,ವೆಂಕಟೇಶನಾಯಕ, ಸೇರಿದಂತೆ ಇನ್ನಿತರರು ಇದ್ದರು.