Saturday, 14th December 2024

Navaratri 2024: ನವರಾತ್ರಿಯ ಶುಭ ದಿನಗಳಲ್ಲಿ ಮೊದಲಿಗೆ ಪೂಜಿಸುವ ‘ಶೈಲಪುತ್ರಿ’ಯ ಬಗ್ಗೆ ತಿಳಿದುಕೊಳ್ಳೋಣ…

Navaratri 2024

ಬೆಂಗಳೂರು: ನವರಾತ್ರಿ ಅಕ್ಟೋಬರ್ 3ರಂದು ಪ್ರಾರಂಭವಾಗಲಿದೆ. ನವರಾತ್ರಿ(Navaratri 2024)ಯಂದು ದೇವಿಯನ್ನು ಒಂಭತ್ತು ವಿಭಿನ್ನವಾದ ರೂಪಗಳಲ್ಲಿ ಪೂಜಿಸಲಾಗುತ್ತದೆ. ಆ ದಿನಗಳಲ್ಲಿ 9 ಬಗೆಯ ಹೂಗಳು, ಹಣ್ಣುಗಳು, ನೈವೇದ್ಯವನ್ನು ದೇವಿಗೆ ಅರ್ಪಿಸಲಾಗುತ್ತದೆ.  ನವರಾತ್ರಿಯ ಮೊದಲ ದಿನವನ್ನು ಪಾರ್ವತಿ ದೇವಿಯ ಅವತಾರವಾದ ತಾಯಿ ಶೈಲಪುತ್ರಿಯನ್ನು ಪೂಜಿಸುತ್ತಾರೆ. ನವರಾತ್ರಿಯ ಮೊದಲ ದಿನವನ್ನು ಆಚರಿಸುತ್ತಿರುವಾಗ, ಶೈಲಪುತ್ರಿ ದೇವಿಯ ಬಗ್ಗೆ ತಿಳಿದುಕೊಳ್ಳಿ.

Navaratri 2024

ತಾಯಿ ಶೈಲಪುತ್ರಿ ಯಾರು?
ದುರ್ಗಾ ದೇವಿಯ ಒಂಬತ್ತು ದೈವಿಕ ಅವತಾರಗಳಲ್ಲಿ ತಾಯಿ ಶೈಲಪುತ್ರಿ ಒಬ್ಬಳು. ಈಕೆ ಪಾರ್ವತಿ ದೇವಿಯ ಮೊದಲ ಅವತಾರವಾಗಿದ್ದಾಳೆ. ಚೈತ್ರ ನವರಾತ್ರಿಯ ಮೊದಲ ದಿನದಂದು ಹಿಂದೂ ಭಕ್ತರು ಅವಳನ್ನು ಪೂಜಿಸುತ್ತಾರೆ. ಸಮೃದ್ಧಿ ಮತ್ತು ಎಲ್ಲಾ ಅದೃಷ್ಟವನ್ನು ನೀಡುವಂತಹ  ತಾಯಿ ಶೈಲಪುತ್ರಿಯನ್ನು ಪ್ರಕೃತಿ ತಾಯಿ ಎಂದು ಜನರು ಹೊಗಳುತ್ತಾರೆ. ದೇವಿಯು ಚಂದ್ರನನ್ನು ಆಳುತ್ತಾಳೆ. ಪುರಾಣದ ಪ್ರಕಾರ, ತಾಯಿ ಪಾರ್ವತಿ ಪರ್ವತ ರಾಜನ ಮಗಳಾಗಿ ಜನಿಸಿದಳು ಮತ್ತು ಅವಳ ಆತ್ಮಾಹುತಿಯ ನಂತರ ಅವಳನ್ನು ಶೈಲಪುತ್ರಿ ಎಂದು ಕರೆಯಲಾಗಿದೆ. ಸಂಸ್ಕೃತದಲ್ಲಿ, ಶೈಲ್ ಎಂದರೆ ಪರ್ವತ, ಪುತ್ರಿ ಎಂದರೆ ಮಗಳು, ಮತ್ತು ಶೈಲಪುತ್ರಿ ಪರ್ವತದ ಮಗಳು ಎಂದರ್ಥ. ಶೈಲಪುತ್ರಿ ದೇವಿಯು ಎತ್ತುಗಳನ್ನು ಏರಿ ಬರುತ್ತಾಳೆ. ಹಾಗಾಗಿ ಅವಳನ್ನು ವೃಷಾರೂಢ ಎಂದು ಕರೆಯಲಾಗುತ್ತದೆ. ಅವಳು ಎರಡು ಕೈಗಳನ್ನು ಹೊಂದಿದ್ದು, ಅವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಅವಳು ಶುದ್ಧತೆ, ಮುಗ್ಧತೆ, ಮತ್ತು ಶಾಂತತೆಯನ್ನು ಸೂಚಿಸುತ್ತಾಳೆ.

Navaratri 2024

ಈ ದಿನದ ಬಣ್ಣ, ಪೂಜಾ ವಿಧಾನಗಳನ್ನು ತಿಳಿದುಕೊಳ್ಳಿ :
ದೃಕ್ ಪಂಚಾಂಗದ ಪ್ರಕಾರ ನವರಾತ್ರಿಯ ಮೊದಲ ದಿನಕ್ಕೆ ಸಂಬಂಧಿಸಿದ ಬಣ್ಣ ಬಿಳಿ. ಈ ದಿನ, ಭಕ್ತರು ಬೇಗನೆ ಎದ್ದು, ಸ್ನಾನ ಮಾಡಿ, ತಾಯಿ ಶೈಲಪುತ್ರಿಯ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಈ ದಿನ ನವರಾತ್ರಿ ಕಲಶವನ್ನು ಇಡುವುದರೊಂದಿಗೆ ನವರಾತ್ರಿ ಆಚರಣೆಯನ್ನು ಮಾಡಲಾಗುತ್ತದೆ. ಇದಕ್ಕೆ ಘಟಸ್ಥಾಪನಾ ಎಂದು ಕರೆಯಲಾಗುತ್ತದೆ. ಈ ಕಲಶದ  ಬಳಿ ಒಂಬತ್ತು ದಿನಗಳ ಕಾಲ ದೀಪವನ್ನು ಬೆಳಗಿಸುತ್ತಾರೆ. ಈ ಕಲಶಕ್ಕೆ ನವಧಾನ್ಯಗಳು ಅಥವಾ ನೀರನ್ನು ತುಂಬಿಡುತ್ತಾರೆ. ನಂತರ, ಭಕ್ತರು ತಾಯಿ ಶೈಲಪುತ್ರಿ ಬಳಿ ಎಣ್ಣೆ ದೀಪ, ಧೂಪದ್ರವ್ಯ, ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಇಡುತ್ತಾರೆ. ದೇಸಿ ತುಪ್ಪದ ವಿಶೇಷ ಭೋಜನವನ್ನು ಸಹ ದೇವಿಗೆ ಅರ್ಪಿಸಲಾಗುತ್ತದೆ.

ಇದನ್ನೂ ಓದಿ: ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿದರೆ ಈ ಆರೋಗ್ಯ ಸಮಸ್ಯೆ ಕಾಡಬಹುದು!

Navaratri 2024

ಈ ರೀತಿಯಲ್ಲಿ ಪಾರ್ವತಿಯ ದೇವಿಯ ಮೊದಲ ಅವತಾರವಾದ ಶೈಲಪುತ್ರಿಯನ್ನು ಪೂಜೆ ಮಾಡಲಾಗುತ್ತದೆ. ಈ ವಿಧಾನದಲ್ಲಿ ದೇವಿಯ ಪೂಜೆ ಮಾಡಿ ನೀವು ಅದೃಷ್ಟ ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳಿ.