-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ 4 ನೇ ದಿನದ ಬಣ್ಣ (Navaratri Colour Styling) ಆರೆಂಜ್ ವರ್ಣ. ಕಿತ್ತಳೆ, ಕೇಸರಿ ಹೀಗೆ ನಾನಾ ತಿಳಿ ಹಾಗೂ ಡಾರ್ಕ್ ಶೇಡ್‌ನ ಉಡುಗೆಗಳಲ್ಲಿ ಕಾಣಿಸಿಕೊಳ್ಳುವ ದಿನ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಈ ಬಣ್ಣದಲ್ಲಿ ನಾನಾ ಡಿಸೈನರ್‌ವೇರ್ಸ್ ಹಾಗೂ ಸೀರೆಗಳು ಮಾರುಕಟ್ಟೆಯಲ್ಲಿ ಎಂಟ್ರಿ ನೀಡಿವೆ. ಇನ್ನು, ಹೊಸತನ್ನು ಖರೀದಿಸದಿದ್ದವರು, ವಾರ್ಡ್‌ರೋಬ್‌ನಲ್ಲಿರುವ ಉಡುಗೆಗಳನ್ನು ಧರಿಸಿ, ನ್ಯೂ ಲುಕ್ ಪಡೆಯಬಹುದು. ಇದಕ್ಕಾಗಿ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಬೇಕು ಎನ್ನುತ್ತಾರೆ ಇಮೇಜ್ ಕನ್ಸಲ್ಟೆಂಟ್ ದಾಮಿನಿ.
ಈ ದಿನ ಆರೆಂಜ್ ಬಣ್ಣ ಯಾಕೆ?
ನವರಾತ್ರಿಯ ಈ ವಿಶೇಷ ದಿನದಂದು ಹುಲಿಯ ಮೇಲೆ ಆಸೀನಳಾಗಿರುವ ಕುಷ್ಮಾಂಡಾ ದೇವಿಯನ್ನು ಎಲ್ಲೆಡೆ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ಕಿತ್ತಳೆ ವರ್ಣಕ್ಕೆ ಆದ್ಯತೆ ಹಾಗಾಗಿ, ದೇವಿಗೆ ಇದೇ ಬಣ್ಣದ ರೇಷ್ಮೆ ಸೀರೆಯಿಂದ ಸಿಂಗರಿಸಿ, ಅಲಂಕರಿಸಲಾಗುತ್ತದೆ. ಹಾಗಾಗಿ ಯುವತಿಯರು ಹಾಗೂ ಮಾನಿನಿಯರು ವೈವಿಧ್ಯಮಯ ಆರೆಂಜ್ ಬಣ್ಣದ ಎಥ್ನಿಕ್‌ವೇರ್‌ಗಳಲ್ಲಿ ಹಾಗೂ ಸೀರೆಗಳಲ್ಲಿ ಕಾಣಿಸಿಕೊಂಡು, ದೇವಿಯ ಆರಾಧಿಸಿ ಆಕೆಯ ಕೃಪೆಗೆ ಪಾತ್ರರಾಗುತ್ತಾರೆ ಎನ್ನುತ್ತಾರೆ ಎಥ್ನಿಕ್‌ವೇರ್ಸ್ ಸ್ಟೈಲಿಸ್ಟ್ ಧನ್ಯಾ ರಾಯ್.
ಸೀರೆಯ ಗಮ್ಮತ್ತು
ಈ ನವರಾತ್ರಿಯಲ್ಲಿ ಆದಷ್ಟೂ ಮಾನೋಕ್ರೋಮಾಟಿಕ್ ಅಥವಾ ಸಾದಾ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿ. ಕ್ರೇಪ್, ಜಾರ್ಜೆಟ್, ಬನಾರಸಿ, ಟಿಶ್ಯೂ, ಅರ್ಗಾನ್ಜಾ ಸೇರಿದಂತೆ ನಾನಾ ಬಗೆಯವು ಟ್ರೆಂಡ್‌ನಲ್ಲಿದ್ದು, ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಫ್ಯಾಬ್ರಿಕ್ ಚೂಸ್ ಮಾಡಿ. ಟ್ರೆಡಿಷನಲ್ ಲುಕ್‌ಗಾಗಿ ಆದಷ್ಟೂ ಗೋಲ್ಡ್ ಲುಕ್ ನೀಡುವಂತಹ ಆಭರಣಗಳನ್ನು ಧರಿಸಿ. ಇಂಡೋ-ವೆಸ್ಟರ್ನ್ ಲುಕ್‌ಗೆ ಕಂಟೆಂಪರರಿ ಡಿಸೈನ್ ಬ್ಲೌಸ್ ಧರಿಸಬಹುದು.
ಹಳೆ ಸೀರೆಗೆ ನಯಾ ಲುಕ್
ಈಗಾಗಲೇ ನಿಮ್ಮ ಬಳಿ ರೇಷ್ಮೆಯ ಆರೆಂಜ್ ಸೀರೆಗಳು ಇದ್ದಲ್ಲಿ, ಅವಕ್ಕೆ ನಯಾ ಲುಕ್ ನೀಡಲು ಡಿಫರೆಂಟ್ ಆಗಿ ಡ್ರೇಪ್ ಮಾಡಿ. ಮೇಕಪ್ ತಿಳಿಯಾಗಿರಲಿ.
ಗ್ರ್ಯಾಂಡ್ ಲುಕ್ ನೀಡುವ ಆರೆಂಜ್ ಬಣ್ಣದ ಡಿಸೈನರ್‌ವೇರ್ಸ್
ಆರೆಂಜ್ ಬಣ್ಣದ ಡಿಸೈನರ್‌ವೇರ್‌ಗಳು ಎದ್ದು ಕಾಣಿಸುತ್ತವೆ. ಎಥ್ನಿಕ್ ಗೌನ್ ಹಾಗೂ ಲೆಹೆಂಗಾಗಳು ಸೆಲೆಬ್ರೆಟಿ ಲುಕ್ ನೀಡುತ್ತವೆ. ಸೆಮಿ ಎಥ್ನಿಕ್ ಹಾಗೂ ಇಂಡೋ-ವೆಸ್ಟರ್ನ್ ಲುಕ್ ನೀಡುವ ಎಥ್ನಿಕ್‌ವೇರ್ಸ್ ಯುವತಿಯರಿಗೆ ಬೆಸ್ಟ್.
ಈ ಸುದ್ದಿಯನ್ನೂ ಓದಿ | Navaratri saree Fashion 2024: ನವರಾತ್ರಿ ಸೀರೆಗಳ ಮೇಲೆ ಮೂಡಿದ ದುರ್ಗಾವತಾರ!
ಕಿತ್ತಳೆ ವರ್ಣದ ಉಡುಗೆ/ ಸೀರೆ ಪ್ರಿಯರಿಗೆ ಸಿಂಪಲ್ ಟಿಪ್ಸ್
ವನ್ ಗ್ರಾಮ್ ಗೋಲ್ಟ್, ಇಮಿಟೇಷನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ.
ಟ್ರೆಡಿಷನಲ್ ಹೇರ್‌ಬನ್ ಅಥವಾ ಜಡೆ ಸಿಂಗಾರ ಮಾಡಿಕೊಳ್ಳಿ.
ಮಹಿಳೆಯರು ಟ್ರೆಡಿಷನಲ್ ಲುಕ್, ಯುವತಿಯರು ವೆಸ್ಟರ್ನ್ ಲುಕ್ ಫಾಲೋ ಮಾಡಬಹುದು.
ಆಕರ್ಷಕವಾಗಿ ಕಾಣಿಸಲು ಹಣೆಗೆ ಅಗಲವಾದ ಕಿತ್ತಳೆ ವರ್ಣದ ಬಂಗಾಲಿ ಬಿಂದಿ ಇಡಿ.
ಕೈಗಳಿಗೆ ಬಳೆ, ಕಿವಿಗೆ ಜುಮಕಿ, ಮಾಟಿ, ಕಮರ್‌ಬಾಂದ್ ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)