Saturday, 14th December 2024

ಮುಂದಿನ ದಿನಗಳಲ್ಲಿ ಇತಿಹಾಸ ನೆನಪಿನಲ್ಲಿಡುವಂತೆ ಹಂಪಿ ಉತ್ಸವ ಆಚರಣೆ

*ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್
*ಹಂಪಿ ಉತ್ಸವ ಸರಳ ಆಚರಣೆಗೆ ಚಾಲನೆ
ಹಂಪಿ: ಪ್ರತಿ ವರ್ಷದಂತೆ ಈ ವರ್ಷವೂ ಹಂಪಿ ಉತ್ಸವ ವಿಜೃಂಭಣೆಯಿಂದ ಆಚರಿಸಬೇಕಾಗಿತ್ತು. ಆದರೇ ಕೋವಿಡ್ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ‌ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.
ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಂಪಿ ಉತ್ಸವಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿ ದರು. ಮುಂದಿನ ದಿನಗಳಲ್ಲಿ ಇತಿಹಾಸ ನೆನಪಿಡುವ ರೀತಿಯಲ್ಲಿ ಹಂಪಿ ಉತ್ಸವ ‌ನಡೆಯಲಿದೆ. ವಿಜಯನಗರದ ವೈಭವದ ಇತಿಹಾಸ ನಾವು ಕಲ್ಪನೆ ಮಾಡುವುದಕ್ಕೂ ಆಗಲ್ಲ;ಅಂತಹ ವೈಭವದ ಇತಿಹಾಸ ನಮ್ಮದು ಎಂದರು.
ಈ ರೀತಿಯ ಸರಳ ಆಚರಣೆಗೆ ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ‌ ನೀಡಿದ್ದಾರೆ. ದಯವಿಟ್ಟು ಜಿಲ್ಲೆಯ ಜನರು ಸಾಮಾಜಿಕ ಅಂತರ,ಸ್ಯಾನಿಟೈಸ್,ಮಾಸ್ಕ್ ಧರಿಸುವುದನ್ನು ಮಾಡಬೇಕು. ಕೋವಿಡ್ ವಾಕ್ಸಿನ್ ಸಿಗುವವರೆಗೆ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬಾರದು ಎಂದರು. ಮುಂದಿನ‌‌ ನವೆಂಬರ್ ನಲ್ಲಿ ಇಡೀ ದೇಶವೇ ಹಂಪಿಯತ್ತ ಸುಳಿಯುವಂತ ಹಂಪಿ ಉತ್ಸವ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಹೊಸಪೇಟೆ ತಾಪಂ ಅಧ್ಯಕ್ಷೆ ಎನ್.ನಾಗವೇಣಿ ಬಸವರಾಜ್, ತಾಪಂ ಸದಸ್ಯ ಪಾಲಪ್ಪ, ಕಮಲಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷ ಸೈಯದ್ ಅಮಾನುಲ್ಲಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಎಸ್. ರಂಗಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಹೊಸಪೇಟೆ ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್, ಪ್ರೊಬೇಷನರಿ ಐಎಎಸ್‌ ರಾಹುಲ್ ಸಂಕನೂರು,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಮತ್ತಿತರರು ಇದ್ದರು.