Saturday, 14th December 2024

ನಾಳೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮುಷ್ಕರ ಇಲ್ಲ

ಬೆಂಗಳೂರು : ನಾಳೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮುಷ್ಕರ ಇಲ್ಲ. ಸಾರಿಗೆ ಬಸ್ ಗಳ ಸಂಚಾರಕ್ಕೂ ಅಡ್ಡಿಯಿಲ್ಲ ಎಂಬುದಾಗಿ ಸಾರಿಗೆ ನೌಕರರ ಸಂಘದ ಕಾರ್ಯದರ್ಶಿ ಆನಂದ್ ಸ್ಪಷ್ಟ ಪಡಿಸಿದ್ದಾರೆ.

ನಾಳೆ ಸಾರಿಗೆ ನೌಕರರು ಮತ್ತೆ ಪ್ರತಿಭಟನೆಗೆ ಇಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಪ್ರತಿಭಟನೆಯ ನಂತ್ರ ನೌಕರರಿಗೆ ಕಿರುಕುಳ ನೀಡಲಾಗುತ್ತಿದೆ. ಇದರಿಂದ ಬೇಸತ್ತಿರುವ ನೌಕರರು ನಾಳೆ ಪ್ರತಿಭಟನೆ ನಡೆಸಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿತ್ತು.

ಪ್ರತಿಭಟನೆ ನಡೆಸಿದ ನೌಕರರಿಗೆ ಡ್ಯೂಟಿ ಕೊಡ್ತಾ ಇಲ್ಲ. ಡ್ಯೂಟಿ ಕೊಡದೆ ಮನೆಗೆ ಕಳುಹಿಸಲಾಗುತ್ತಿದೆ. ಈ ಮೂಲಕ ನೌಕರರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬುದಾಗಿ ಬಿಎಂಟಿಸಿ ಎಂಡಿಗೆ 28 ನೌಕರರು ದೂರು ನೀಡಿದ್ದರು ಎನ್ನಲಾಗಿದೆ.