Saturday, 14th December 2024

ನೂತನ ಮುಖ್ಯಕಾರ್ಯದರ್ಶಿಯಾಗಿ ಪಿ.ರವಿ ಕುಮಾರ್ ನೇಮಕ

ಬೆಂಗಳೂರು : ರಾಜ್ಯದ ಮುಖ್ಯಕಾರ್ಯದರ್ಶಿಯಾಗಿದ್ದ ಟಿಎಂ ವಿಜಯ್ ಭಾಸ್ಕರ್ ಅಧಿಕಾರಾವಾಧಿ ಡಿ.31 ಕ್ಕೆ  ಮುಕ್ತಾಯ ಗೊಳ್ಳುತ್ತಿದೆ. ಇದರಿಂದಾಗಿ ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ರಾಜ್ಯ ಸರ್ಕಾರ ಪಿ.ರವಿ ಕುಮಾರ್ ರನ್ನು ನೇಮಕ ಮಾಡಿ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, 1984ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಪಿ.ರವಿ ಕುಮಾರ್ ಅವರನ್ನು ರಾಜ್ಯದ 38ನೇ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.