Saturday, 14th December 2024

Pakistanis Arrested in Bangalore : ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ

Pakistanis Arrested in Bangalore

ಬೆಂಗಳೂರು: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳ ಹಾವಳಿ ಹೆಚ್ಚಾಗಿದೆ. ಮೂರು ದಿನಗಳ ಹಿಂದೆ ನಾಲ್ವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದ ಪೊಲೀಸರು (Pakistanis Arrested in Bangalore) ಇದೀಗ ಮತ್ತೆ ಇನ್ನೂ ಮೂವರನ್ನು ಬೆಂಗಳೂರಿನಲ್ಲಿ ಗುರುವಾರ ವಶಕ್ಕೆ ಪಡೆದಿದ್ದಾರೆ. ಅವರ ಮೂಲ ಹಾಗೂ ಉದ್ದೇಶದ ಬಗ್ಗೆ ತನಿಖೆ ಆರಂಭಗೊಂಡಿದೆ.

ಮೂರು ದಿನಗಳ ಹಿಂದೆ ಬಂಧಿತರಾದವರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಬಂಧಿತ ನಾಲ್ವರು ಪಾಕಿಸ್ತಾನದ ಕರಾಚಿ ಮತ್ತು ಲಾಹೋರ್ ಮೂಲದವರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಂಧಿತರನ್ನು ಪಾಕಿಸ್ತಾನದ ಕರಾಚಿ ನಿವಾಸಿ ರಶೀದ್ ಅಲಿ ಸಿದ್ದಕ್ಕಿ ಅಲಿಯಾಸ್ ಶಂಕರ್ ಶರ್ಮಾ. ಆಯೇಷಾ ಅಲಿಯಾಸ್ ಆಶಾ ರಾಣಿ, ಪಾಕಿಸ್ತಾನದ ಲಾಹೋರ್ ನಿವಾಸಿ; ಹನೀಫ್ ಮೊಹಮ್ಮದ್ ಅಲಿಯಾಸ್ ರಾಮ್‌ಬಾಬ್‌ ಶರ್ಮಾ, ಲಾಹೋರ್ ನಿವಾಸಿ ರುಬಿನಾ ಅಲಿಯಾಸ್ ರಾಣಿ ಶರ್ಮಾ ಬಂಧಿತರಾಗಿದ್ದಾರೆ.

ಲಿವ್ ಇನ್ ರಿಲೇಶನ್‌ನಲ್ಲಿದ್ದ ನಟಿ ಮದುವೆಗೆ ನಿರಾಕರಣೆ; ಆತ್ಮಹತ್ಯೆಗೆ ಶರಣಾದ ಯುವಕ

ಬೆಂಗಳೂರು: ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪ್ರೇಯಸಿ, ಧಾರಾವಾಹಿ ನಟಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಯುವಕನೊನ್ನ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮದನ್ (25) ಮೃತ ಯುವಕ. ಈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Self Harming).

ಘಟನೆಯ ಹಿನ್ನೆಲೆ

ʼಕನ್ನಡತಿʼ ಧಾರಾವಾಹಿಯಲ್ಲಿ ನಟಿಸಿದ್ದ ವೀಣಾ ಮತ್ತು ಮದನ್ ಪರಸ್ಪರ ಪ್ರೀತಿಸುತ್ತಿದ್ದು, ಕೆಲವು ದಿನಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಇಬ್ಬರೂ ಮಂಗಳವಾರ ರಾತ್ರಿ ಒಂದೇ ರೂಮಿನಲ್ಲಿ ಪಾರ್ಟಿ ಕೂಡ ಮಾಡಿದ್ದರು. ಈ ವೇಳೆ ಮದನ್ ವೀಣಾಗೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಆದರೆ ವೀಣಾ ಮದುವೆಯನ್ನು ನಿರಾಕರಿಸಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: Pankaj Yadav : ಆರ್‌ಜೆಡಿ ಪ್ರಧಾನ ಕಾರ್ಯದರ್ಶಿ ಪಂಕಜ್ ಯಾದವ್‌ಗೆ ದುಷ್ಕರ್ಮಿಗಳಿಂದ ಗುಂಡೇಟು

ಇದರಿಂದ ನೊಂದ ಮದನ್‌ ಮಧ್ಯರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಕೊಂಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಮದನ್ ಇವೆಂಟ್ ಮ್ಯಾನೇಜ್‌ಮೆಂಟ್‌ ಕಂಪೆನಿಯೊಂದರಲ್ಲಿ ಡೆಕೊರೇಟ್ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಸಿರಿಯಲ್ ಸೆಟ್‌ನಲ್ಲಿ ವೀಣಾಳ ಪರಿಚಯವಾಗಿತ್ತು. ಬಳಿಕ ಇಬ್ಬರ ಮಧ್ಯೆ ಸಲುಗೆ ಬೆಳೆದಿತ್ತು. ಇಬ್ಬರು ಲೀವಿಂಗ್ ರಿಲೇಶನ್ ಹೊಂದಿದ್ದರು ಎನ್ನಲಾಗಿದೆ. ಸದ್ಯ ವೀಣಾಗಳನ್ನು ವಶಕ್ಕೆ ಪಡೆದಿರುವ ಹುಳಿಮಾವು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೀಣಾ ಧಾರಾವಾಹಿ ಜತೆಗೆ ಕೆಲವು ಜಾಹೀರಾತುಗಳಲ್ಲಿಯೂ ನಟಿಸಿದ್ದಾಳೆ.