Friday, 1st December 2023

7 ಪರಿಷತ್ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ

ಬೆಂಗಳೂರು: ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ.

ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳ ಅವಧಿಯು ದಿನಾಂಕ 14-06-2022ರಂದು ಕೊನೆಗೊಳ್ಳಲಿದೆ. ಈ ಸ್ಥಾನಗಳಿಗೆ ಜೂ.3ರಂದು ಮತದಾನ ನಡೆಯಲಿದೆ ಎಂಬುದಾಗಿ ತಿಳಿಸಿದೆ.

  1. ಲಕ್ಷ್ಮಣ್ ಸವದಿ
  2. ರಾಮಪ್ಪ ತಿಮ್ಮಾಪುರ್
  3. ಅಲ್ಲಂ ವೀರಭದ್ರಪ್ಪ
  4. ಹೆಚ್ ಎಂ ರಮೇಶ್ ಗೌಡ
  5. ವೀಣಾ ಅಚ್ಚಯ್ಯ ಎಸ್
  6. ನಾರಾಯಣ ಸ್ವಾಮಿ ಕೆ.ವಿ
  7. ಲೇಹರ್ ಸಿಂಗ್ – ಮುಂತಾದವರ ಕಾಲಾವಧಿ ಮುಕ್ತಾಯಾಗಲಿದೆ.

ಮೇ.17ರಂದು ಚುನಾವಣಾ ಅಧಿಸೂಚನೆ ಪ್ರಕಟಣೆ ಹೊರಬೀಳಲಿದೆ. ಮೇ.24ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗ ಲಿದೆ. ಮೇ.25ರಂದು ನಾಮಪತ್ರಗಳ ಪರಿಶೀಲನೆ ಯಾಗಲಿದೆ. ಮೇ.27ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆ ದಿನವಾಗಲಿದೆ.

ಜೂ.3ರಂದು ಮತದಾನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಜೂ.3ರಂದು ಸಂಜೆ 5 ಗಂಟೆಗೆ ಮತ ಏಣಿಕೆ ಕಾರ್ಯ ನಡೆದು, ಫಲಿತಾಂಶ ಘೋಷಣೆಯಾಗಲಿದೆ. ಜೂ.7-06-2022ರಂದು ಚುನಾವಣಾ ಮುಕ್ತಾಯಗೊಳ್ಳಲಿದೆ.

error: Content is protected !!