Thursday, 12th December 2024

Petrol Bomb: ರೀಲ್ಸ್‌ ಹುಚ್ಚಿಗಾಗಿ ಪೆಟ್ರೋಲ್‌ ಬಾಂಬ್‌ ಸಿಡಿಸಿದ ವಿದ್ಯಾರ್ಥಿಗಳು!

petrol bomb

ಹಾಸನ: ರೀಲ್ಸ್‌ (Instagram reels) ಮಾಡುವ ಹುಚ್ಚಿಗಾಗಿ ವಿದ್ಯಾರ್ಥಿಗಳು ಪೆಟ್ರೋಲ್‌ ಬಾಂಬ್‌ (Petrol bomb) ಸಿಡಿಸಿದ ಘಟನೆ (Hasan news) ವರದಿಯಾಗಿದೆ. ಘಟನೆಯ ವಿಡಿಯೋ ವೈರಲ್‌ (Viral video) ಆಗಿದೆ.

ಕಾಲೇಜಿನ ವಿದ್ಯಾರ್ಥಿಯೊಬ್ಬ ದೀಪಾವಳಿ ನೆಪದಲ್ಲಿ ಪೆಟ್ರೋಲ್ ಸಿಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಸನದ ರಾಜೀವ್ ಆಯುರ್ವೇದ ಕಾಲೇಜಿನ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ ಪದವಿ ವ್ಯಾಸಂಗ ಮಾಡುತ್ತಿರುವ ಲೋಕಕಿರಣ್ ಹೆಚ್ ಎನ್ನುವ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕಾಲೇಜಿನ ಪಕ್ಕದ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿದ್ದಾನೆ.

ವಿಡಿಯೋವನ್ನು ಲೋಕಕಿರಣ್ ಸ್ನೇಹಿತ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಯು ತನ್ನ ಬೈಕ್​ನಲ್ಲಿದ್ದ ಪೆಟ್ರೋಲ್​ ತೆಗೆದು ಕವರ್​ಗೆ ತುಂಬಿ, ಅದಕ್ಕೆ ಬತ್ತಿ ಹಾಕಿ, ಬೆಂಕಿ ಕೊಟ್ಟಿದ್ದಾರೆ. ಕವರ್ ಸ್ಫೋಟಗೊಳ್ಳುತ್ತಿದ್ದಂತೆ ಸುಮಾರು 10 ಅಡಿ ಎತ್ತರದವರೆಗೂ ಬೆಂಕಿ ಹೊರಹೊಮ್ಮಿತ್ತು. ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಇನ್ಸ್‌ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

ಶಿವಮೊಗ್ಗ : ನಿನ್ನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿ ಗ್ರಾಮದ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂರು ಯುವಕರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮೂವರ ಯುವಕರ ಮೃತ ದೇಹಗಳು ಪತ್ತೆಯಾಗಿವೆ.

ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ ನಿನ್ನೆ ಈ ಒಂದು ದುರಂತ ಸಂಭವಿಸಿತ್ತು. ಚೇತನ ಜೈನ್ (28) ಸಿಗಂದೂರು, ರಾಜು (28) ಗಿಣಿವಾರ, ಹಾಗೂ ಸಂದೀಪ್ (30) ಹುಲಿದೇವರಬನ ನಿವಾಸಿಗಳು ಎಂದು ತಿಳಿದುಬಂದಿದೆ ಯುವಕರ ಮೃತ ದೇಹ ಇದೀಗ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.