Sunday, 10th November 2024

ಹಣಮಂತ ನ್ಯಾಮಗೊಂಡ ಇವರಿಗೆ ಪಿ.ಹೆಚ್.ಡಿ ಪ್ರಧಾನ

ಕೊಲ್ಹಾರ: ತಾಲ್ಲೂಕಿನ ರೋಣಿಹಾಳ ಗ್ರಾಮದ ವೃತ್ತಿಯಲ್ಲಿ ಪಶುವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ.ಹಣಮಂತ ನ್ಯಾಮಗೊಂಡ ಇವರು ಪ್ರೊಫೇಸರ್ ಡಾ.ಎಂ ನಾರಾಯಣಸ್ವಾಮಿ ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ ವಿಭಾಗದ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಮಂಡಿಸಿದ “ಕಡಿಮೆ ಜಡ್ಡೇತರ ಘನವಸ್ತುಗಳ ಲಕ್ಷ್ಮಣ ಹೊಂದಿರುವ ಹೋಲ್ ಸ್ಟೈನ್ ಫ್ರೀಶಿಯನ್ ಮಿಶ್ರತಳಿ ಹಸುಗಳ ರಕ್ತರಸದಲ್ಲಿರುವ ಪ್ರಚೋಧಕಗಳ ಮತ್ತು ಜೀವರಾಸಾಯನಿಕ ಅಂಶಗಳ ವಿಶ್ಲೇಷಣೆ” ಎಂಬ ಅಧ್ಯಯನ ಪ್ರಬಂಧಕ್ಕೆ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀದರ ಪಿ.ಹೆಚ್.ಡಿ ಪದವಿ ನೀಡಿದೆ.