Thursday, 12th December 2024

Physical Abuse: ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಹೈದರಾಬಾದ್‌ನಲ್ಲಿ ಅರೆಸ್ಟ್

ಚಿಂಚೋಳಿ(ಕಲಬುರಗಿ): 80 ವರ್ಷದ ವೃದ್ದೆ ಮೇಲೆ ಅತ್ಯಾಚಾರ (Physical Abuse) ಎಸಗಿ, ಬೆಳ್ಳಿ ಸರ ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಚಿಂಚೋಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಯಾಬ್ ಮೀರಾನಶಾ ಫಕ್ಕಿರ ಬಂಧಿತ ಆರೋಪಿ. ನ. 18 ರಂದು ತಾಲೂಕಿನ ಗ್ರಾಮವೊಂದರ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ, ಐನೋಳಿ ಗ್ರಾಮದವನಾಗಿದ್ದ. ಈತ ಕುಟುಂಬಕ್ಕೆ ಬೇಡವಾದ ವ್ಯಕ್ತಿಯಾಗಿದ್ದರಿಂದ ಊರಿಂದ ಊರಿಗೆ ಅಡ್ಡಾಡುವ ಅಲೆಮಾರಿಯಾಗಿದ್ದ. ಹೀಗಾಗಿ ಇವನನ್ನು ವಶಕ್ಕೆ ಪಡೆಯುವುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು.

ಆರೋಪಿ ಪತ್ತೆಗಾಗಿ ಡಿವೈಎಸ್‌ಪಿ ಸಂಗಮನಾಥ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಚಿಂಚೋಳಿ ಸಿಪಿಐ ಕಪೀಲದೇವ, ಪಿಎಸ್ಐ ಗಂಗಮ್ಮ ಜಿನಕೇರಿ, ಮಡಿವಾಳಪ್ಪ ಬಾಗೋಡಿ, ವೆಂಕಟೇಶ ನಾಯಕ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿತ್ತು. 12 ದಿನಗಳಲ್ಲಿ ಆರೋಪಿ ತಯಾಬ್ ಮೀರಾನಶಾ ಫಕ್ಕಿರನನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸುವಲ್ಲಿ ಚಿಂಚೋಳಿ ಪೊಲೀಸರು ಯಶಸ್ವಿ ಕಂಡರು.

ಈ ಆರೋಪಿಯ ಮೇಲೆ ನೆರೆಯ ತೆಲಂಗಾಣ ರಾಜ್ಯದ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿ, ಬಂಧನದ ವಾರೆಂಟ್ ಜಾರಿ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗೆ ಶುಕ್ರುವಾರ ಬೆಳಗ್ಗೆ ಹೈದರಾಬಾದ್‌ನಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Actress Ramya: ಹ್ಯಾಪಿ ಬರ್ತ್ ಡೇ My Divu; ನಟಿ ರಮ್ಯಾಗೆ ಶುಭಾಶಯ ಹೇಳಿದ ಆ ಹುಡುಗ ಯಾರು?

ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ; 4ನೇ ತರಗತಿ ವಿದ್ಯಾರ್ಥಿನಿ ಸಾವು!

Heart attack

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ ಸಂಬಂಧವಿಲ್ಲದಂತೆ ಎಲ್ಲರಲ್ಲೂ ಹೃದಯದ ಸಮಸ್ಯೆಗಳು ಕಂಡುಬರುತ್ತಿವೆ. ಕರ್ನಾಟಕದಲ್ಲೂ ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು (Heart attack) ಹೆಚ್ಚಾಗುತ್ತಿವೆ. ಈ ನಡುವೆ ತೆಲಂಗಾಣ ರಾಜ್ಯದ ಮಂಚಿರ‍್ಯಾಲ ಜಿಲ್ಲೆಯ ಜನ್ನಾರಂ ಮಂಡಲದ ರೊಟಿಗೂಡ ಗ್ರಾಮದಲ್ಲಿ 10 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿದ ಮೃತಪಟ್ಟಿರುವುದು ನಡೆದಿದೆ.

ಸಮನ್ವಿತಾ ಮೃತ (10) ಬಾಲಕಿ. ನಾಲ್ಕನೇ ತರಗತಿ ಓದುತ್ತಿದ್ದ ಬಾಲಕಿ, ಎಂದಿನಂತೆ ಬೆಳಗ್ಗೆ ಶಾಲೆಗೆ ಹೋಗಲು ತಯಾರಾಗುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ಹೀಗಾಗಿ ತಂದೆ ನಾಗರಾಜು ಅವರು ತಕ್ಷಣ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಸಮನ್ವಿತಾ, ಲಕ್ಷೆಟ್ಟಿಪೇಟದ ಕೃಷ್ಣವೇಣಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಳು.

ಎರಡು ವಾರಗಳ ಹಿಂದೆ ಇದೇ ಜಿಲ್ಲೆಯ ಚೆನ್ನೂರು ಪಟ್ಟಣದ ಪದ್ಮನಗರ್‌ ಕಾಲೋನಿಯಲ್ಲಿ 12 ವರ್ಷದ ಕಸ್ತೂರಿ ನಿವೃತಿ ಎಂಬ ಬಾಲಕಿ ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಳು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.

ಈ ಸುದ್ದಿಯನ್ನೂ ಓದಿ | Navjot Singh Sidhu: ನಿಂಬೆ ರಸ, ಡಯಟ್‌ನಿಂದ ಪತ್ನಿಯ ಕ್ಯಾನ್ಸರ್‌ ಮಾಯ ಎಂದ ನವಜೋತ್ ಸಿಂಗ್‌ಗೆ ಸಂಕಷ್ಟ