Tuesday, 10th December 2024

Plain Lehenga Fashion: ಸಿಂಪಲ್‌ ಹುಡುಗಿಯರನ್ನು ಸಿಂಗರಿಸಲು ಬಂದಿದೆ ಸಾದಾ ಲೆಹೆಂಗಾಗಳು

Plain Lehenga Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಿಂಪಲ್‌ ಟ್ರೆಡಿಷನಲ್‌ ವಿನ್ಯಾಸದ ಸಾದಾ ಶೇಡ್‌ನ ಡಿಸೈನರ್‌ ಲೆಹೆಂಗಾಗಳು (Plain Lehenga Fashion) ಹಬ್ಬದ ನಂತರದ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿವೆ. ಹೌದು, ನನಗೆ ಟ್ರೆಡಿಷನಲ್‌ ಲುಕ್‌ ನೀಡುವ ಲೆಹೆಂಗಾ ಬೇಕು! ಆದರೆ, ಹೆವ್ವಿ ಡಿಸೈನ್‌ನ ಗ್ರ್ಯಾಂಡ್‌ ಲೆಹೆಂಗಾ ಬೇಡ! ಭಾರವಿರದ ಲೈಟ್‌ವೈಟ್‌ ಲೆಹೆಂಗಾ ಬೇಕು, ಧರಿಸಿದಾಗ ಆಕರ್ಷಕವಾಗಿಯೂ ಕಾಣಿಸಬೇಕು ಎನ್ನುವವರಿಗಾಗಿಯೇ ಇದೀಗ ಸಿಂಗಲ್‌ ಶೇಡ್‌ನ ಸಾಲಿಡ್‌ ಕಲರ್‌ ಹಾಗೂ ಮಾನೋಕ್ರೋಮ್‌ ಶೇಡ್‌ನ ಸೆಲ್ಫ್‌ ಡಿಸೈನ್‌ನ ಕಲರ್‌ನ ಸಿಂಪಲ್‌ ಸಾದಾ ಲೆಹೆಂಗಾ ಡಿಸೈನರ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ.

ಚಿತ್ರಗಳು: ಶಾರ್ವರಿ, ನಟಿ

ಯಾವ್ಯಾವ ಬಗೆಯವು ಸದ್ಯ ಚಾಲ್ತಿಯಲ್ಲಿವೆ? ಆಯ್ಕೆ ಹಾಗೂ ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

ಸಿಂಪಲ್‌ ಹುಡುಗಿಯರಿಗಾಗಿ ಸಾದಾ ಲೆಹೆಂಗಾ

“ಲೆಹೆಂಗಾಗಳು ಎಂದಾಕ್ಷಣ ಎಲ್ಲರೂ ಗ್ರ್ಯಾಂಡ್‌ ಲುಕ್‌ಗಾಗಿ ಎಂದುಕೊಳ್ಳುತ್ತಾರೆ. ಸಿಂಪಲ್‌ ಡಿಸೈನ್‌ನವು ದೊರೆಯುವುದಿಲ್ಲ ಎಂದು ಇತರೇ ಎಥ್ನಿಕ್‌ವೇರ್‌ಗಳ ಆಯ್ಕೆ ಮಾಡುತ್ತಾರೆ. ಆದರೆ, ಇದೀಗ ಲೆಹೆಂಗಾದ ಈ ಕಾನ್ಸೆಪ್ಟ್ ಬದಲಾಗಿದೆ. ಸಿಂಪಲ್‌ ಹುಡುಗಿಯರಿಗಾಗಿ ಹಾಗೂ ಹೆಚ್ಚು ಅಡಂಬರ ಬಯಸದ ಯುವತಿಯರಿಗಾಗಿ ಸಾದಾ ಸೀದಾ ಸಿಂಪಲ್‌ ಲೆಹೆಂಗಾಗಳು ಬಿಡುಗಡೆಗೊಂಡಿವೆ. ಯುವತಿಯರನ್ನು ಸೆಳೆದಿವೆ” ಎನ್ನುತ್ತಾರೆ ಡಿಸೈನರ್‌ ರಿಚಾ ಶರ್ಮಾ.

ಟ್ರೆಂಡ್‌ನಲ್ಲಿರುವ ಸಿಂಪಲ್‌ ಲೆಹೆಂಗಾಗಳು

ಪಾಸ್ಟೆಲ್‌ ಶೇಡ್‌ನ ಸಾದಾ ಡಿಸೈನ್‌ನ ಲೆಹೆಂಗಾಗಳು ಅತಿ ಹೆಚ್ಚು ಟ್ರೆಂಡಿಯಾಗಿವೆ. ಇನ್ನು, ಇವನ್ನು ಹೊರತುಪಡಿಸಿದಲ್ಲಿ, ಸಾಲಿಡ್‌ ಕಲರ್‌ ಅಥವಾ ಡಾರ್ಕ್‌ ಶೇಡ್‌ನ ಸೆಲ್ಫ್‌ ಕಲರ್‌ ಇರುವಂತಹ ಬಿಗ್‌ ಬಾರ್ಡರ್‌ನ ಲೆಹೆಂಗಾ ಸೆಟ್‌ಗಳು ಕೂಡ ಚಾಲ್ತಿಯಲ್ಲಿವೆ. ಒಂದೇ ಕಲರ್‌ನ ಲಂಗ ಹಾಗೂ ಬ್ಲೌಸ್‌ ಮತ್ತು ದುಪಟ್ಟಾ ಇರುವಂತಹ ಈ ಸಿಂಪಲ್‌ ಲೆಹೆಂಗಾಗಳು ಲೆಕ್ಕವಿಲ್ಲದಷ್ಟು ಕಲರ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಮಾರಾಟಗಾರರು.

ಸೀರೆಗಳಿಗೂ ಸಿಕ್ಕ ಲೆಹೆಂಗಾ ರೂಪ

ಇನ್ನು, ಬಹಳಷ್ಟು ಮಾನಿನಿಯರು ಬೋಟಿಕ್‌ಗಳಲ್ಲಿ ಸಾದಾ ಅಥವಾ ಬಾರ್ಡರ್‌ ಇರುವಂತಹ ಸೆಲ್ಫ್‌ ಕಲರ್‌ ಇರುವಂತಹ ಹಳೆಯ ಸೀರೆಗಳಲ್ಲಿ ಲೆಹೆಂಗಾ ಡಿಸೈನ್‌ ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಡಿಸೈನರ್‌ ರೇಷ್ಮಾ.

ಈ ಸುದ್ದಿಯನ್ನೂ ಓದಿ | Star Fashion: ಸ್ಟಾರ್‌ ಸ್ಕರ್ಟ್ ಫ್ಯಾಷನ್‌ನಲ್ಲಿ ನಟಿ ಸಾನ್ಯಾ ಅಯ್ಯರ್ ಗ್ಲಾಮರಸ್‌ ಲುಕ್‌!

ಸಿಂಪಲ್‌ ಸಾದಾ ಲೆಹೆಂಗಾ ಆಯ್ಕೆ & ಸ್ಟೈಲಿಂಗ್‌ಗೆ 5 ಸಿಂಪಲ್‌ ಟಿಪ್ಸ್

  • ಹುಡುಗಿಯರಿಗೆ ಸಾದಾ ಲುಕ್‌ ನೀಡುವ ಪಾಸ್ಟೆಲ್‌ ಶೇಡ್‌ ಆಕರ್ಷಕವಾಗಿ ಕಾಣುತ್ತದೆ.
  • ನಾನಾ ಬಗೆಯಲ್ಲಿ ಡ್ರೇಪ್‌ ಮಾಡಿದಾಗ ಡಿಫರೆಂಟ್‌ ಲುಕ್‌ ನಿಮ್ಮದಾಗುತ್ತದೆ.
  • ದಾವಣಿ ಬದಲಿಸಿದಲ್ಲಿ ಹೊಸ ರೂಪ ನೀಡಿ ಮರು ಬಳಕೆ ಮಾಡಬಹುದು.
  • ಗೋಲ್ಡ್ ಜ್ಯುವೆಲರಿ ಅಥವಾ ಕಾಂಟ್ರಸ್ಟ್ ಆಭರಣಗಳನ್ನು ಧರಿಸಿದಲ್ಲಿ ಅಂದವಾಗಿ ಕಾಣಿಸುತ್ತದೆ.
  • ಟ್ರೆಡಿಷನಲ್‌ ಮೇಕೋವರ್‌ ಸುಂದರವಾಗಿ ಕಾಣಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)