ದಲಿತ ಸಮರ ಸೇನೆಯ ಸ್ಲಂ ಮಹಿಳೆಯರಿಂದ ಅಂಬೇಡ್ಕರ್ ಜಯಂತಿ ಆಚರಣೆ
ಮಾನವಿ : ತಾಲೂಕಿನ ದಲಿತ ಸಮರ ಸೇನೆ ಕರ್ನಾಟಕ ಸ್ಲಂ ಜನರ ಕ್ರಿಯಾ ವೇದಿಕೆಯ ಸಂಘಟನೆಯ ಮಹಿಳೆಯಿಂದ ಡಾ ಬಿ ಆರ್ ಅಂಬೇಡ್ಕರ್ ಅವರ 130 ನೇ ಜನ್ಮದಿನಾಚರಣೆಯಲ್ಲಿ ದಲಿತ ಮುಖಂಡ ಪಿ ಅನೀಲಕುಮಾರ ಮಾತನಾಡಿ, ಎಲ್ಲ ಜನಾಂಗದಲ್ಲಿ ಕೂಡ ಬಡವರಿದ್ದು ಅವರ ಕುಟುಂಬ ಅಭಿವೃದ್ಧಿಯಾಗಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿದಾಗ ಮಾತ್ರ ಸಾಧ್ಯ ಎಂದರು.
ಪಟ್ಟಣದ ಬಂಗಾರಗಡ್ಡೆಯ ಅಮೃತ ನಗರ ಕಾಲೋನಿಯಲ್ಲಿ ದಲಿತ ಸಮರ ಸೇನೆ ಕರ್ನಾಟಕ ಸ್ಲಂ ಜನರ ಕ್ರಿಯಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಅನೀಲ ನೀಲಕಂಠ ಇವರ ನೇತೃತ್ವದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ 130 ಜಯಂತಿಯನ್ನು ಬಹಳ ಅದ್ದೂರಿಯಾಗಿ ಮಾಡಿದರು ನಂತರ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪಾ ಬೆಳಗಿಸುವ ಮೂಲದ ಉದ್ಘಾಟನೆ ಮಾಡಿ ಮಾತಾನಾಡಿದ ಅವರು ಅಂಬೇಡ್ಕರ್ ಅವರು ಬಡವರ ಏಳಿಗೆಗಾಗಿ ದುಡಿಯುವುದರ ಜೊತೆಗೆ ಸಮಾಜದಲ್ಲಿ ತಿಳಿಯಲ್ಪಟ್ಟ ಬಡವರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ನಾವು ನಮ್ಮ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ನೀಡುವುದರ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರಲು ಸಾಧ್ಯ ಎಂದ ಪಿ ಅನೀಲಕುಮಾರ ಹೇಳಿದರು.
ನಂತರ ಮುಖ್ಯ ಅಥಿತಿಯಾಗಿ ಯಲ್ಲಪ್ಪ ಬಾದರದಿನ್ನಿ, ಜೆ ರವಿಕುಮಾರ್ ವಕೀಲರು. ಪತ್ರಕರ್ತ ಆನಂದಸ್ವಾಮಿ ನಕ್ಕುಂದಿ. ಚಿತ್ರಕಲಾವಿದ ವಾಜೀದ್.
ಹಾಗೂ ದಲಿತ ಹಿರಿಯ ಹೋರಾಟಗಾರ ಅಂಬಣ್ಣ ಅರೋಲಿಕರ್ ಕಾರ್ಯಕ್ರಮದ ಕುರಿತು ಮಾತಾನಾಡಿದ ಅಂಬೇಡ್ಕರ್ ಅವರು ಒಂದು ಜನಾಂಗಕ್ಕೆ ಸೀಮಿತವಲ್ಲ ಅವರು ಭಾರತ್ನ ರತ್ನ ದೇಶಕ್ಕಾಗಿ ಹಾಗೂ ಬಡವರಿಗೆಗಾಗಿ, ಮಹಿಳೆಯರ ಹಕ್ಕಿಗಾಗಿ, ಶೋಷಿತ ಸಮುದಾಯಗಳ ಏಳಿಗೆಗಾಗಿ ದುಡಿದವರು ಅವರ ಹೋರಾಟದ ಫಲವಾಗಿ ನಾವು ರಾಜಕೀಯವಾಗಿ,ಆರ್ಥಿಕವಾಗಿ, ಧಾರ್ಮಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗಿದೆ ಎಂದು ಹೇಳುವ ಮೂಲಕ ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನದ ಸಾಧನೆಯನ್ನು ಹಾಗೂ ಅವರನ್ನು ಯಾಕೆ ಪೂಜೆ ಮಾಡಬೇಕು ಎಂದು ವಿವರವಾಗಿ ತಿಳಿಸಿದರು. ಶೋಷಿತ ಸಮುದಾಯದವರು ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಕಲಿಯುವುದು ಅತ್ಯವಶ್ಯಕ ಎಂದು ಅಲ್ಲಿ ನೆರೆದ ಸಾವಿರಾರು ಮಹಿಳೆಯರಿಗೆ ತಿಳಿಸಿದರು.
ನಂತರ ಅಂಬೇಡ್ಕರ್ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ವೇದಿಕೆಯ ಮೇಲಿರುವ ಗಣ್ಯರಿಗೆ ಸನ್ಮಾನಿಸಿದ ಸಂಘಟನೆಯ ಅಧ್ಯಕ್ಷ ಅನೀಲ ನೀಲಕಂಠ ಮಾತಾನಾಡಿ ನಮ್ಮ ಸಂಘಟನೆಯ ಶಕ್ತಿಯಿಂದ ಇನ್ನೂ ಹೆಚ್ಚಿನ ಹೋರಾಟವನ್ನು ಮಾಡಿ ಸರ್ಕಾರದಿಂದ ಬರುವ ಅನುದಾನವನ್ನು ಬಳಸಿಕೊಂಡು ನಮ್ಮ ಶೋಷಿತ ಸಮುದಾಯವರು ಹಾಗೂ ಸ್ಲಂ ಜನರು ಅಭಿವೃದ್ಧಿಯಾಗುವುದಕ್ಕೆ ಚಿಂತನೆ ಮಾಡಬೇಕು ಇದಕ್ಕೆಲ್ಲ ನಿಮ್ಮ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರು ಹಾಗೂ ಪತ್ರಕರ್ತ ಚಂದ್ರಶೇಖರ ಮದ್ಲಾಪೂರ. ಬಸವರಾಜ ನಿಲೋಗಲ.ಅಂಬೇಡ್ಕರ್ ನಗರ ಕರಿಯಪ್ಪ ಪ್ರಕಾಶ್ ಶ್ರೀನಿವಾಸ್ ರೆಡ್ಡಿ ಮೌನೇಶ್ ಶರಣಪ್ಪ ಮೋದಿನ ಮತ್ತು ದಲಿತ ಸಮರ ಸೇನೆ ಕರ್ನಾಟಕ ಎಲ್ಲಾ ಸದಸ್ಯರು ಹಾಗೂ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು….