Friday, 13th December 2024

ಬಡವರ ದೀನದುರ್ಬಲರ ನಾಯಕ: ಮುತ್ತಪ್ಪ ಪೋತೆ

ಇಂಡಿ: ಕೊಡಗಿನಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಬಿಜೆಪಿ ಕಾರ್ಯಕರ್ತರು ನಡೆಸಿದ ಘಟನೆ ನಿಜಕ್ಕೂ ಗುಂಡಾಗಿರಿ ಸಂಸ್ಕೃತಿ ಎಂದು ಕಾಂಗ್ರೆಸ ಮುಖಂಡ ಮುತ್ತಪ್ಪ ಪೋತೆ ಹೇಳಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಅನೇಕ ಮುಖ್ಯ ಮಂತ್ರಿಗಳನ್ನು ಕಂಡಿದ್ದೆವೆ ಡಿ.ದೇವರಾಜ ಅರಸರ ನಂತರ ಬಡವರ ದೀಬದುರ್ಬಲ, ಅಲ್ಪಸಂಖ್ಯಾತ ಹಿಂಳಿದವರ ನೊಂದವರ ಧ್ವನಿಯಾಗಿರುವ ಏಕೈಕ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೆ ಕ್ಷಣಗಳಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಬಡವರ ಹಸಿವನ್ನು ನಿಗಿಸಿದ ಪುಣ್ಯಾತ್ಮ ಸಿದ್ದರಾಮಯ್ಯನವರ ಜನಪಿಯತೆ ಸಹಿಸದ ಬಿಜೆಪಿಯವರು ಈ ಕೃತ್ಯೆವೆಸಗಿದ್ದಾರೆ.

ಸಿದ್ದರಾಮಯ್ಯನವರ ಜನಪ್ರಿಯತೆ ಬಿಜೆಪಿ ತಳಮಳವುಂಟ್ಟು ಮಾಡಿದೆ. ಕಾಂಗ್ರೆಸಿನವರು ಇಂತಹ ಹೀನ ಕೃತ್ಯೆ ಎಂದೂ ಮಾಡಿಲ್ಲ ಹೀನ ಸಂಸ್ಕೃತಿಗೆ ಕಾಂಗ್ರೆಸ್ ಇಳಿಯುವುದಿಲ್ಲ. ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿರುವ ಬಿಜೆಪಿ ಕಾರ್ಯಕರ್ತರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮಜರುಗಿಸಬೇಕು. ಮಾಜಿ ಮುಖ್ಯ ಮಂತ್ರಿ ಸಿದ್ದರಾಯ್ಯ ಒಂದೇ ವರ್ಗದ ನಾಯಕರಲ್ಲ ಇಡೀ ಎಲ್ಲ ಸಮುದಾಯದ ನಾಯಕ ಹೀಗಾಗಿ ತಪ್ಪ ಮಾಡಿದವರಿಗೆ ಕ್ರಮಜರುಗಿಸದೆ ಇದ್ದರೆ ಇಡೀ ಎಲ್ಲ ಸಮುದಾಯಗಳು ರಸ್ತೆಗೀಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆ ಹರತಾಳ ನಡೆಯುತಲಿವೆ ಇದರ ಬಿಸಿ ಮುಂಬರುವ ದಿನಗಳಲ್ಲಿ ಬಿಜೆಪಿಗೆ ತಟ್ಟಲಿದೆ ಎಂದರು.