Friday, 13th December 2024

Pralhad Joshi: ಕಾಂಗ್ರೆಸ್‌ಗೆ ತುಷ್ಟೀಕರಣ ರಾಜಕಾರಣವೇ ಪ್ರಮುಖವಾಗಿದೆ: ಜೋಶಿ ಕಿಡಿ

Pralhad Joshi

ಸಂಡೂರು: ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಗಲಭೆಕೋರರ ಮೇಲಿನ ಕೇಸ್ ಹಿಂಪಡೆಯಲು ಸಿದ್ಧತೆ ನಡೆಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದರು. ಸಂಡೂರು (Sandur) ವಿಧಾನಸಭಾ ಕ್ಷೇತ್ರದ ತೋರಣಗಲ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಮುಸ್ಲಿಂ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಈ ವೇಳೆ ಹರಿಹಾಯ್ಡರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಹಳೇ ಹುಬ್ಬಳ್ಳಿ ಗಲಭೆಕೋರರ ಮೇಲಿನ ಕೇಸ್ ರದ್ದುಪಡಿಸಿತು. ಇದೀಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಮುಸ್ಲಿಮರ ಮೇಲಿನ ಕೇಸ್ ಹಿಂಪಡೆಯಲು ತಯಾರಿ ನಡೆಸಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | S Jaishankar: ಜೈಶಂಕರ್‌ ಸಂದರ್ಶನ ಪ್ರಸಾರ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮ ನಿರ್ಬಂಧಿಸಿದ ಕೆನಡಾಕ್ಕೆ ಚಾಟಿ ಬೀಸಿದ ಭಾರತ

ರಾಜ್ಯ ಸರ್ಕಾರ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಹಿಂಪಡೆಯಲು ಎಲ್ಲಾ ತಯಾರಿ ನಡೆಸಿರುವ ಬಗ್ಗೆ ತಮಗೆ ಪಕ್ಕಾ ಮಾಹಿತಿ ಬಂದಿದೆ. ತನ್ನದೇ ಪಕ್ಷದ ಒಬ್ಬ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದಾರೂ ಕಾಂಗ್ರೆಸ್‌ಗೆ ತುಷ್ಟೀಕರಣ ರಾಜಕಾರಣವೇ ಪ್ರಮುಖವಾಗಿದೆ ಎಂದು ಪ್ರಲ್ಹಾದ್‌ ಜೋಶಿ ಕಿಡಿಕಾರಿದರು.

ಹಿಂದೂ ಸಂಘಟನೆ, ಹಿಂದೂಗಳು ಮತ್ತು ದೇವಸ್ಥಾನಗಳ ಮೇಲೆ ದಾಳಿ ನಡೆದರೂ ಕಾಂಗ್ರೆಸ್ ಸರ್ಕಾರ ಹಿಂದೂಯೇತರ ಆರೋಪಿಗಳನ್ನೇ ರಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಖಾಲಿ ಹಾಳೆ ಸಂವಿಧಾನ ಪ್ರತಿ ಹಂಚಿಕೆ; ಬುದ್ಧಿ ಭ್ರಮಣೆ ಆಗಿದೆಯೇ?

ಕಾಂಗ್ರೆಸ್ಸಿಗರು ಮಹಾರಾಷ್ಟ್ರದಲ್ಲಿ ಖಾಲಿ ಹಾಳೆಯ ಸಂವಿಧಾನ ಪ್ರತಿ ಹಂಚಿದ್ದು, ಬುದ್ಧಿ ಭ್ರಮಣೆ ಆಗಿದೆಯೇ? ಇವರಿಗೆ ಎಂದು ಲೇವಡಿ ಮಾಡಿದ ಅವರು, ಮಾತೆತ್ತಿದರೆ ಸಂವಿಧಾನ, ದಲಿತರ ಪರ ಎನ್ನುವ ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ, ದಲಿತರಿಗೆ ಕೊಡುವ ಗೌರವ ಇದೇನಾ? ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು.

ನಾಗ್ಪುರದಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಇದ್ದ ಕಾರ್ಯಕ್ರಮದಲ್ಲಿ ಮೊದಲ ಪುಟ ಸಂವಿಧಾನ ಗ್ರಂಥದ ಚಿತ್ರ, ಒಳಗೆಲ್ಲ ಖಾಲಿ ಪುಟಗಳಿರುವ ಪ್ರತಿಗಳನ್ನು ಹಂಚಿದೆ. ಇದು ಸಂವಿಧಾನದ ಮೇಲೆ ಹಾಗೂ ಅಂಬೇಡ್ಕರ್, ದಲಿತರ ಮೇಲೆ ಕಾಂಗ್ರೆಸ್ಸಿಗರಿಗೆ ಇರೋ ಭಾವನೆ, ಕಿಮ್ಮತ್ತು ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದು ಅವರು ವಾಗ್ದಾಳಿ ಮಾಡಿದರು.

ತುಷ್ಟೀಕರಣದ ರಾಜಕಾರಣ

ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣದ ಪರಾಕಾಷ್ಟೆ ತಲುಪಿದೆ. ಪರಿಣಾಮ ಮತ್ತೆ ಬಾಂಬ್ ಬೆದರಿಕೆ, ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ಸಿಗುತ್ತಿದೆ ಎಂದು ದೂರಿದ ಅವರು, ರಾಜ್ಯದಲ್ಲಿ ನಿರ್ಬಂಧಿತ ಸೆಮಿ (ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ) ದ ಅವತಾರಗಳು ಮತ್ತೆ ಮರುಕಳಿಸುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದರ 175 ಕೇಸ್‌ಗಳನ್ನು ಪಡೆದಿತ್ತು ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Building Collapse: ಬಂಗಾರಪೇಟೆಯಲ್ಲಿ ಏಕಾಏಕಿ ಕುಸಿದ 3 ಅಂತಸ್ತಿನ ಕಟ್ಟಡ; ತಪ್ಪಿದ ಭಾರಿ ಅನಾಹುತ!

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ 2013-18 ರ ಅವಧಿಯಲ್ಲಿ ಕೋರ್ಟ್ ಸಹ ಸೆಮಿಗೆ ನಿರ್ಬಂಧ ಹೇರಿತು. ಆದರೆ, SDPI, PFI ಕಾರ್ಯಚಟುವಟಿಕೆಗಳು ಸೆಮಿಯ ಅವತಾರ ಎಂಬಂತೆ ನಡೆಯುತ್ತಿದ್ದು, ಈಗ ಮತ್ತೆ ಚುರುಕಾಗಿದೆ. ಕಾಂಗ್ರೆಸ್ ಸರ್ಕಾರ ಇದಕ್ಕೆ ಕುಮ್ಮಕ್ಕು ಕೊಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದರು.