Saturday, 14th December 2024

ವಿವಿಧ ಬೇಡಿಕೆ ‌ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಂಚೋಳಿ‌: ತಾಲೂಕಿನಲ್ಲಿ ಜೆಡಿಎಸ್ ‌ಕಾರ್ಯಕರ್ತರು‌‌‌ ವಿವಿಧ ಬೇಡಿಕೆಯ ‌ಈಡೇರಿಕೆಗಾಗಿ ಆಗ್ರಹಿಸಿ ಪಟ್ಟಣ ದಲ್ಲಿ ಪ್ರತಿಭಟನೆ ನಡೆಸಿ ದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಕಳೆದ 20 ದಿನಗಳಿಂದ ನಿರಂತರವಾಗಿ  ಪೆಟ್ರೋಲ್, ಡೀಸೆಲ್‌, ಅಡುಗೆಯ ಅನಿಲ ಸಿ.ಎನ್.ಜಿ ಇನ್ನಿತರ ಅಗತ್ಯ ವಸ್ತು ಗಳನ್ನು ಬೆಲೆ ಏರಿಕೆ ಮಾಡುತ್ತಿರುವುದು ಜನ ವಿರೋಧಿ ಯಾಗಿದೆ ಎಂದು ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ ಅಪಾದಿಸಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಪೆಟ್ರೊಲಿಯಂ ವಸ್ತುಗಳ ಮೇಲೆ ವಿಧಿಸುತ್ತಿರುವ ತೆರಿಗೆ 50% ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಪೆಟ್ರೋಲ್, ಡೀಸೆಲ್‌ ಬೆಲೆ ತಕ್ಷಣ ಇಳಿಸಬೇಕು. ಕಲ್ಯಾಣ ಕರ್ನಾಟಕ 6 ಜಿಲ್ಲೆಗಳ  ಸರ್ಕಾರಿ ಇಲಾಖೆ ಸಮಯ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರವಿಶಂಕರ್ ರೆಡ್ಡಿ ಮುತ್ತಂಗಿ, ನಿಯಾಜ ಅಲಿ, ಹಣಮಂತ ಪೂಜಾರಿ, ರಾಜಕುಮಾರ, ಸನ್ನಿ, ಬಸವರಾಜ ಕಲ್ಲೂರ ಇನ್ನಿತರು ಇದ್ದರು.