Wednesday, 11th December 2024

ಗುಡಿಹಳ್ಳಿ ನಾಗರಾಜ್ ಅಗಲಿಕೆ ಪತ್ರಿಕಾ ರಂಗಕ್ಕೆ ತುಂಬಲಾಗದ ನಷ್ಟ : ಪಿಟಿಪಿ

ಹರಪನಹಳ್ಳಿ: ಪ್ರಜಾವಾಣಿ ಪತ್ರಿಕೆಯ ಹಿರಿಯ ಪತ್ರಕರ್ತರು ಹಾಗೂ ಸುಧಾ ವಾರ ಪತ್ರಿಕೆಯ ಉಪ ಸಂಪಾದಕರಾಗಿದ್ದ ಗುಡಿಹಳ್ಳಿ ನಾಗರಾಜ್ (67) ಅವರ ನಿಧನ ಪತ್ರಿಕಾ ರಂಗಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಮಾಜಿ ಸಚಿವರು ಹಾಗೂ ಹಾಲಿ ಹಡಗಲಿ ಶಾಸಕರು ಆಗಿರುವ ಪಿ.ಟಿ.ಪರಮೇಶ್ವರ ನಾಯ್ಕ್ ತಿಳಿಸಿ ದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು ಮೂಲತಃ ತಾಲೂಕಿನ ಅರಸೀಕೆರೆ ಸಮೀಪದ ಕೆರೆಗುಡಿಹಳ್ಳಿ ಗ್ರಾಮ ದವರಾಗುದ್ದ ಗುಡಿಹಳ್ಳಿ ನಾಗರಾಜ್ ಅವರು ಕೆಲವು ವರ್ಷಗಳಿಂದ ಇವರ ಸಂಪಾದಕೀಯದಲ್ಲಿ “ರಂಗ ನೇಪಥ್ಯ” ಎಂಬ ಮಾಸಪತ್ರಿಕೆ ಮೂಡಿಬರುತ್ತಿತ್ತು. ಇವರು ಲೇಖಕರು, ಬರಹಗಾರರಾಗಿದ್ದು ಇವರ ಬರಹಗಳು ನಾಡಿನ ಜನತೆಗೆ ಚಿಂತನೆಗೆ ಒಳಪಡಿಸುತವಂತಿದ್ದವು. ಹವ್ಯಾಸಿ ನಾಟಕಕಾರರಾಗಿದ್ದರು ಎಂದು ಪಿ.ಟಿ. ಪರಮೇಶ್ವರ ನಾಯ್ಕ್ ತಿಳಿಸಿದ್ದಾರೆ.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಕೆಪಿಸಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಟಿ.ಭರತ್, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರೇಮ್ ಕುಮಾರ್ ಗೌಡ, ವಕೀಲ ಮತ್ತಿಹಳ್ಳಿ ಅಜ್ಜಣ್ಣ, ಎಂ.ಬಿ.ಯಶವಂತಗೌಡ, ಹೆಚ್.ಬಿ.ಪರಶು ರಾಮಪ್ಪ, ಮುತ್ತಿಗಿ ಸಾಬಳ್ಳಿ ಜಂಬಣ್ಣ, ತಿಮ್ಮಾನಾಯ್ಕ, ಮಹಾಂತೇಶ್ ನಾಯ್ಕ, ಟಿ.ಪ್ರವೀಣ್ ಕುಮಾರ್, ಶ್ರೀಕಾತ್ ಯಾದವ್, ರಿಯಾಜ್ ಅಹ್ಮದ್ ಸೇರಿದಂತೆ ಮತ್ತಿತರರು ಗುಡಿಹಳ್ಳಿ ನಾಗರಾಜ್ ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.