Wednesday, 11th December 2024

ತುಂಗಭದ್ರಾ ಪುಷ್ಕರ ಪುಣ್ಯಸ್ನಾನ ಕಾರ್ಯಕ್ರಮಕ್ಕೆ ಚಾಲನೆ

ಸಿಂಧನೂರು:  ತಾಲೂಕಿನ ದಡೇಸುಗೂರು ಗ್ರಾಮದಲ್ಲಿ ತುಂಗಭದ್ರ ಪುಷ್ಕರ ಪುಣ್ಯಸ್ಥಾನ ಕಾರ್ಯಕ್ರಮಕ್ಕೆ ಶಾಸಕ ವೆಂಕಟ ರಾವ್ ನಾಡಗೌಡ ಅವರು ಶುಕ್ರವಾರ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ 12 ದಿನಗಳ ಕಾಲ ಪುಷ್ಪರ ಸ್ನಾನಕ್ಕೆ ಎಲ್ಲ ವ್ಯವಸ್ಥೆ ಸಿದ್ಧಪಡಿಸಲಾಗಿದೆ ಸಾಮಾಜಿಕ ಅಂತರ ಇನ್ನಿತರ ಸರ್ಕಾರದ ನಿಯಮಗಳನ್ನು ಅರಿತುಕೊಂಡು ವಿವಿಧ ಇಲಾಖೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗಿದೆ ಸರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥಿತವಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ನಮ್ಮ ಬಗ್ಗೆ ಆರೋಪ ಮಾಡುತ್ತಿರುವುದು ಸರಿಯಲ್ಲ. ರೈತರಿಗಾಗಿ ಈಗಾಗಲೇ ಎರಡನೇ ಬೆಳಗ್ಗೆ ನೀರು ಬಿಡುವ ಸಲುವಾಗಿ ಐಸಿಸಿ ಸಭೆ ಕರಿಯಲು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ರೈತರಿಗೆ ಅನ್ಯಾಯ ಮಾಡುವ ಕೆಲಸ ನಾನು ಮಾಡಲ್ಲ ಎಂದರು. ಹಂಪನಗೌಡ ಬಾದರ್ಲಿ ಅವರು ಶ್ರೀದೇವಿ ಶ್ರೀನಿವಾಸ್ ಅವರ ಪರ ಮಾತನಾ ಡಿದ್ದಾರೆ. ಒಂದು ಇಲಾಖೆಯ ಕಟ್ಟಡ ಜಾಗ ಮತ್ತೊಂದು ಇಲಾಖೆಗೆ ಹೇಗೆ ಕೊಡುವುದು ಅನ್ನುವುದು ಅರಿತುಕೊಳ್ಳಬೇಕು ಮೊದಲು ಎಂದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಲಿಂಗಪ್ಪ, ಸತ್ಯನಾರಾಯಣ, ನಾಗೇಶ್ ಹಂಚಿನಾಳ ಕ್ಯಾಂಪ್, ಸಾಯಿ ರಾಮ್ ಕೃಷ್ಣ, ಮುತ್ತಣ್ಣ ಸೇರಿದಂತೆ ಇತರರು ಇದ್ದರು