Saturday, 5th October 2024

ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ

ಪಾವಗಡ: ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಬುಧವಾರ ಬೆಳಿಗ್ಗೆ ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ದಾಳಿ ನಡೆಸಿದರು.

ಪಾವಗಡ ತಾಲೂಕಿನಲ್ಲಿ ಹಲವು ವರ್ಷಗಳಿಂದ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಕೋವಿಡ್ 19 ನಿಯಂತ್ರಣ ಸಲುವಾಗಿ ಮಂಗಳವಾರ ಏಕಾಏಕಿ ವಿವಿಧ ಕಡೆಗಳಾದ ಅರಸೀಕೆರೆ, ಮಂಗಳವಾಡ, ಸಿ.ಕೆ.ಪುರ, ಪಿ.ರೂಪ್ಪ, ಕಿಲಾರ್ಲಹಳ್ಳಿಗಳಲ್ಲಿ ದಾಳಿ ನಡೆಸಿದ್ದಾರೆ.

ನಕಲಿ ವೈದ್ಯರ ಕ್ಲಿನಿಕ್ ಗಳ ಬೀಗ ಹಾಕಿ ವಶಪಡಿಸಿಕೊಳ್ಳಲಾಯಿತು. ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡಬಾರದು ಮತ್ತು ಔಷಧಿ ಸಹ ನೀಡಬಾರದು. ನೆಗಡಿ, ಜ್ವರ, ಇತರೆ ಸಮಸ್ಯೆಗಳಿಗೆ ಮೂದಲು ಕೋವಿಡ್ ಟೆಸ್ಟ್ ಮಾಡಿಸಿ ತದನಂತರ ಅವರಿಗೆ ಚಿಕಿತ್ಸೆ ನೀಡಬೇಕು.

ಇತ್ತೀಚೆಗೆ ನಕಲಿ ವೈದ್ಯರು ಚಿಕಿತ್ಸೆ ನೀಡಿದ ನಂತರ ಜ್ವರ, ಕೆಮ್ಮು, ತೀವ್ರಗೊಂಡ ನಂತರ ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ರೋಗಿಗಳು ಬರುತ್ತಿರುವ ಪ್ರಕರಣಗಳು ಹೆಚ್ಚಾಗಿವೆ ಎಂಬುದಾಗಿ ತಿಳಿದು ಬಂದಿದೆ. ಇದರಿಂದಾಗಿ ಜನತೆಯ ಜೀವಕ್ಕೆ ಹೆಚ್ಚಿನ ಸಮಸ್ಯೆಗಳು ಅಗುತ್ತಿವೆ ಎಂಬುದಾಗಿ ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್19 ಹೆಚ್ಚಾಗುತ್ತಿವೆ.ಇದರಿಂದಾಗಿ ಸಾರ್ವಜನಿಕ ಜ್ವರ, ಕೆಮ್ಮು, ಇತರೆ ಸಮಸ್ಯೆ ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಬಂದು ತೋರಿಸಬೇಕು ಎಂದರು.

ನಕಲಿ ವೈದ್ಯರ ಬಳಿ ಹೋಗಿ ಜೀವ ಕಳೆದುಕೂಳ್ಳಬೇಡಿ. ಮತ್ತೆ ನಕಲಿ ವೈದ್ಯರು ಚಿಕಿತ್ಸೆ ನೀಡುವುದು ಕಂಡು ಬಂದರೆ ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.

ಈ ವೇಳೆ ತಹಸೀಲ್ದಾರ್ ಕೆ.ಆರ್.ನಾಗರಾಜ್, ತಾಲೂಕು ವೈದ್ಯಾಧಿಕಾರಿ ತಿರುಪತಯ್ಯ,  ಸಿಪಿಐ ಲಕ್ಮಿಕಾಂತ, ಕಂದಾಯ ನಿರೀಕ್ಷೆಕ ರಾಜಗೋಪಾಲ್, ಗ್ರಾಮ ಲೆಕ್ಕಿಗ ಗಿರೀಶ್ ಇತರರು ಇದ್ದರು.