Friday, 13th December 2024

ರಾಜ್ಯಮಟ್ಟದ ಪ್ರಶಸ್ತಿಗೆ ಬಲರಾಮ್ ಆಯ್ಕೆ

ತುಮಕೂರು: 2023 ನೇ ಸಾಲಿನ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ  ಪ್ರಶಸ್ತಿಗೆ ಉತ್ತಮ ಆಡಳಿತ ನಿರ್ವಹಣೆಗಾಗಿ ಪಾವಗಡ ಸೋಲಾರ್ ಪಾರ್ಕಿನ ಮಾಜಿ ಅಧ್ಯಕ್ಷ ಜಿ.ವಿ ಬಲರಾಮ್ ಆಯ್ಕೆಯಾಗಿದ್ದಾರೆ.
2013ರಿಂದ 2018ರವರೆಗೆ ಪ್ರಪಂಚದ ಅತಿ ದೊಡ್ಡ ಪಾವಗಡ ಸೋಲಾರ್ ಪಾರ್ಕ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನಿರ್ವಹಣೆ ಮಾಡಿದ್ದರು. ನಂತರ ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
*
ಹಲವು ಸವಾಲುಗಳ ನಡುವೆ 2013 ರಿಂದ 2018ರವರೆಗೆ ಅಧ್ಯಕ್ಷರಾಗಿ ಪಾವಗಡ ಸೋಲಾರ್ ಪಾರ್ಕ್ ಅನ್ನು ಪ್ರಪಂಚದಲ್ಲಿ ಮಾದರಿನ್ನಾಗಿಸಲು ಹಲವು ಗುಣಮಟ್ಟದ ಆಡಳಿತ ಕಾರ್ಯವೈಖರಿಯನ್ನು ಕೈಗೊಳ್ಳಲಾಗಿತ್ತು. ನಾನು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ನನ್ನ ಸೇವೆಯನ್ನು ಗುರುತಿಸಿ ಸರಕಾರ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದಗಳು.
ಜಿ.ವಿ.ಬಲರಾಮ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ.