ಇಂಡಿ: ಮಠ, ಮಾನ್ಯಗಳು ಮಾನವ ನಮ್ಮದಿಯ ಬದುಕಿಗೆ ದಾರಿದೀಪವಾಗಿದ್ದು ಅನೇಕ ಶರಣ, ಸಂತ,ದಾರ್ಶನಿಕ ಪುರುಷರು ಈ ಭಾಗದಲ್ಲಿ ನಡೆದಾಡಿ ಮಾನವೀಯ ಮೌಲ್ಯಗಳ ದಾರಿಯಲ್ಲಿ ನಡೆಯುವಂತೆ ಈ ಭಾಗದ ಜನರಿಗೆ ಸಂಸ್ಕಾರ ನೀಡಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸೋಮವಾರ ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಲಿಂ. ಮುರುಘೇಂದ್ರ ಶಿವಾಚಾರ್ಯರ ೪೨ ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೋಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಠ-ಮಾನ್ಯಗಳು ಪವಿತ್ರ ಪುಣ್ಯ ಸ್ಥಾನ. ಅಭಿವೃದ್ದಿ ವಿಷಯದಲ್ಲಿ ರಾಜಕಾರಣ ಬರಬಾರದು ರಾಜ್ಯ ಸರಕಾರದಲ್ಲಿ ಅವರನ್ನು ಮುಂದೆ ಮಾಡಿ ಕೆಲಸ ಮಾಡಿದ್ದೇವೆ.
ಕೇಂದ್ರ ವಿಷಯದಲ್ಲಿ ನಾನು ಅಭಿವೃದ್ದಿ ಮಾಡಿರುವೆ ಅಭಿವೃದ್ದಿಯಲ್ಲಿ ಪಾರ್ಟಿ ಪಂಗಡ ಮಾಡಿದರೆ ಭಿವೃದ್ದಿಯಾಗುವುದಿಲ್ಲ ಎಂಬುದನ್ನು ಬಲ್ಲೆ ಸಾರ್ವಜನಿಕ ಕೆಲಸ ಕಾರ್ಯ ಗಳಲ್ಲಿ ರಾಜಕಾರಣ ಮಾಡಿಲ್ಲ ಎಲ್ಲರೂ ಒಟ್ಟಿಗೆ ಸೇರಿಸಿ ಯಾವುದೇ ಪಾರ್ಟಿ ಇರಲಿ ಕೆಲಸ ಮಾಡಿದ್ದೇವೆ. ವಿಜಯಪೂರ ೪ ಮೇಜರ್ ರೋಡ ಮಾಡಿಸಿದ್ದೇನೆ, ಕರೇಂಟ್ ರೈಲು ನೋಡಲು ಬೇರೆ ಕಡೆ ಹೋಗಿ ನೋಡುತ್ತಿದ್ದರು ಈಗ ಕರೆಂಟ್ ರೈಲು ಮಾಡಿಸಲಾಗಿದೆ. ಪ್ರತಿಯೊಂದು ಅಭಿವೃದ್ದಿ ವಿಷಯದಲ್ಲಿ ನಾವು ಹಿಂದೆ ಬಿದ್ದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಪ್ರಪಂಚದಲ್ಲಿಯೇ ವಿಭ್ನಿನ್ನ ದೇಶ ಶಾಂತಿ, ಪ್ರೀತಿ ನೆಮ್ಮದಿ ಸಿಗುವುದು ಮಠಮಾನ್ಯಗಳಿಂದ ಮಾತ್ರ ಸಾಧ್ಯೆ. ಭಗವಂತ ನಮಗೆ ಜೀವನ ಕೊಟ್ಟಿದ್ದಾನೆ. ದೇಶದ,ನಾಡಿನ ಹಿರಿಮೆ ಗಿರಿಮ ವಿಚಾರಧಾರೆಗಳಿಂದ ಬದುಕುತ್ತಿದ್ದೇವೆ.
ಮಠ ಮಾನ್ಯಗಳ ಶೀಗಳು ತಂದೆ ತಾಯಿಯಂತೆ ಸಂಸ್ಕಾರ ನೀಡುತ್ತಾರೆ. ಕರ್ನಾಟಕದಲ್ಲಿ ಅತೀ ಹೆಚ್ಚು ಮಠ ಮಾನ್ಯಗಳು ಈ ಭಾಗದ ಗೋಳಸಾರದ ಶ್ರೀಪುಂಡಲಿ0ಗೇಶ್ವರ ಕ್ಷೇತ್ರ, ಭಂಥನಾಳದ , ಲಚ್ಯಾಣದ ಶ್ರೀಸಿದ್ದಲಿಂಗೇಶ್ವರ ಮಠ , ಇಂಚಗೇರಿ ಕ್ಷೇತ್ರ ಹೀಗೆ ಹತ್ತಾರು ಮಠಗಳು ಈ ಭಾಗದ ಜನರ ಹೃದಯ ಶ್ರೀಮಂತ ರನ್ನಾಗಿಸಿ ಸಮಾಜ ಮುಖಿ ಕಾರ್ಯ ನಡೆಯುತ್ತಿವೆ.
ಶಿರಶ್ಯಾಡ ಶ್ರೀಮಠ ಸಮಾಜ ಮುಖಿಯಾಗಿ ಅಮೋಘ ಕೆಲಸ ಕಾರ್ಯ ಮಾಡಿದವರಿಗೆ ಗೌರವಿಸುವ ಕಾರ್ಯ ಮಾಡಿರವುದು ಶ್ಲಾö್ಯಗನೀಯ, ವಿಜಯಪೂರ ಜ್ಞಾನ ಯೋಗಾಶ್ರಮದ ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಶ್ರೀಗಳು ವಾಣಿಯಿಂದ ಈ ಭಾಗ ಪಾವನಮಯವಾಗಿದೆ ಇಂದು ಅಭಿನವ ಮುರಘೇಂದ್ರ ಶಿವಾಚಾರ್ಯರರು ಕೂಡಾ ಅವರ ಅಘಾದ ಜ್ಞಾನದ ಬಲದಿಂದ ಸಮಾಜ ಪರಿಶುದ್ದಗೋಳಿಸುತ್ತಿರುವುದು ಸಂತಸ ತಂದಿದೆ.
*
ಚುನಾವಣೆ ಬಂದಾಗ ೧ ತಿಂಗಳು ರಾಜಕಾರಣ ಮಾಡೋಣ ಉಳಿದ ದಿನಗಳಲ್ಲಿ ಜನರ ಅಭಿವೃದ್ದಿರ ಚಿಂತನೆ ಇರಬೇಕು. ಸಂಸದ ರಮೇಶ ಜಿಗಜಿಣಗಿ ಬೇರೆ ಪಕ್ಷದವರಿದ್ದರೂ ಕೂಡಾ ಅವರು ಅನುಭವ ,ಗೌರವಯುತ ಮಾತನಾಡಿರುವ ಮಾತುಗಳು ಪ್ರೇರಣೆ ಯಾಗಿರಲಿ. ನಾವಿಬ್ಬರೂ ಸಾಕಷ್ಟು ವೇದಿಕೆಗಳಲ್ಲಿ ಹಂಚಿಕೊ0ಡರೂ ಸಹಿತ ಎಂದಿಗೂ ಪರವಿರೋಧವಾದ ಮಾತುಗಳು ಆಡಿಲ್ಲ. ರಾಜಕಾರಣ ಬರುತ್ತದೆ ಹೋಗುತ್ತದೆ ರಾಜಕಾರಣದಲ್ಲಿ ಬದ್ದತೆ ಇರಬೇಕು ಎಂದರು.
ಅಭಿನವ ಮುರುಘೇಂದ್ರ ಶಿವಾಚಾರ್ಯರು ಆರ್ಶೀವಚನ ನೀಡಿದರು. ಸಿದ್ದರಾಮ ಶಿವಚಾರ್ಯರು ದಿವ್ಯಸಾನಿಧ್ಯ ವಹಿಸಿದರು. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಗುರುಪಾದೇಶ್ವರ ಶಿವಚಾರ್ಯರು, ಶಾಂತವೀರ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ಅಭಿನವ ಶಿವಲಿಂಗೇಶ್ವರ ಶಿವಾಚಾರ್ಯರು ಆರ್ಶೀವಚನ ನೀಡಿದರು.
ಮಡಿವಾಳೇಶ್ವರ ಮಹಾರಾಜರು, ಉಪಸ್ಥಿತಿ ಅಭಿನವ ಪುಂಡಲಿ0ಗ ಮಹಾರಾಜರು, ಶಿವಯೋಗಿ ದೇವರು ಸಾನಿಧ್ಯವಹಿಸಿದರು.
ಕಾಸುಗೌಡ ಬಿರಾದಾರ,ಮಲ್ಲಿಕಾರ್ಜುನ ಕೀವುಡೆ. ಪ್ರಸಾದ ಎಳಗಿ, ಮಲ್ಲುಗೌಡ ಪಾಟೀಲ, ಗುರಲಿಂಗಪ್ಪ ತೆಗ್ಗೆಳ್ಳಿ, ರಾಮಸಿಂಗ ಕನ್ನೋಳ್ಳಿ, ಪಿ.ಡಿ.ಓ ಮಹಾದೇವ ಕೆರೂಟಗಿ, ಎಸ್.ಎಸ್ ಮಜ್ಜಗಿ, ಶ್ರೀಮಠದ ಭಕ್ತಾದಿಗಳು ಸೇರಿದಂತೆ ಗ್ರಾಮದ ಮುಖಂಡರು , ಗಣ್ಯರು ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.