ಮಾನವಿ : ರಾಯಚೂರು ಜಿಲ್ಲಾದ್ಯಾಂತ ಸಾರ್ವಜನಿಕ ಪಡಿತರ ವಿತರಣೆಯ ಅಕ್ಕಿಯನ್ನು ಅಕ್ರಮ ಮಾರಾಟ ನಿಯಂತ್ರಣ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪಡಿತರ ಸರಬಾರಾಬು ಟೆಂಡರ್‌ಗೆ ಕರೆ ಕೊಡಲು ರಾಜ್ಯದಲ್ಲಿ ರಸಗೊಬ್ಬರ ಬೆಲೆ ಎಂಕೆಗೆ ಆಗ್ರಹಿಸಿ ಕೂಡಲೇ ಸೂಕ್ತ ಕ್ರಮಕ್ಕೆ ಒತ್ತಾಯಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಆಶೋಕ ನಿಲೋಗಲ್, ತಾಲೂಕ ಅಧ್ಯಕ್ಷ ಮುದುಕಪ್ಪ ನಾಯಕ ಇವರು ತಾಲೂಕ ದಂಡಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.
ರಾಜ್ಯದಲ್ಲಿ ಕೋವಿಡ್-19 ಕೋರಾನದ ಅಲೆ 2ನೇ ಹಂತದ ಅತಿ ವೇಗವಾಗಿ ಹಬ್ಬಿಕೊಳ್ಳುತ್ತಿರುವುದರಿಂದ ರಾಜ್ಯದಲ್ಲಿ 2 ತಿಂಗಳುಗಳಿಂದ ಸಾರ್ವಜನಿಕ ಗೃಹ ನಿರ್ಬಂಧದ(ಲಾಕ್‌ಡೌನ್) ಮತ್ತು ಕರ್ಮ್ಯೂ ವಿಧಿಸಿದ್ದು, ವಿದಿತವಾದ ವಿಷಯವಾಗಿದೆ. ಇಂತಹ ದೂಷ್ಟಕರ ಸಮಯದಲ್ಲಿ ಪ್ರಧಾನಮಂತ್ರಿ ಗರೀಟ್ ಕಲ್ಯಾಣ ಯೋಜನ (ಪಿ.ಎಮ್.ಜಿ.ಕೆ.ವೈ) ಮತ್ತು ಆಹಾರ ಭದ್ರತಾ ಯೋಜನೆ ಅನುಷ್ಠಾನದಿಂದ ಒಂದಿಷ್ಟು ದಿನಗಳ ಕಾಲ ನಿರ್ಗತಿಕರು ಹಾಗೂ ಪಡಿತರದಾರರು ಗೃಹ ನಿರ್ಬಂದನದಲ್ಲಿ ಹಸಿವಿನಿಂದ ಬಳಲ,ಬಾರದೆಂಬ ಕಾರಣಕ್ಕೆ ಉಚಿತವಾಗಿ ಹೆಚ್ಚುವರಿ ಅಕ್ಕಿ ವಿತರಣೆ ಮಾಡಲು ಅನುಷ್ಠಾನ ಸರ್ಕಾರ ರೂಪಿಸಿದೆ. ಆದರೆ ಇಲ್ಲಿನ ಎಸ್.ಸಿ. ಇಲಾಖೆಯ ಅಧಿಕಾರ ವೃಂದದವರ ಸಕ್ರಿಯ ಸಹಕಾರ ಮತ್ತು ಕುಮ್ಮುಕ್ಕಿನ ನೀತಿಯಿಂದ ಜಿಲ್ಲೆಯಾದ್ಯಂತ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮ ಮಾರಾಟ, ದಂದ್ದೆಕೊರರ ಪಾಲಾಗುತ್ತಿದ್ದು ವಿರ್ಪಯಾಸ.ನಮ್ಮ ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ದೂರು ಸಲ್ಲಿಸಿದರು ಕೂಡ ಯಾವುದೇ ಕ್ರಮವಹಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಸಗೊಬ್ಬರ ಬೆಲೆ ಏರಿಕೆಗೆ ಖಂಡನೆ
ಕೇಂದ್ರ ಸರ್ಕಾರ ದಿಢೀರನೆ ರಸಗೊಬ್ಬರದ ಬೆಲೆಯನ್ನು ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲಾ. ಇದನ್ನು ನಮ್ಮ ಸಂಘಟನೆ ತೀರ್ವವಾಗಿ ಖಂಡಿಸುತ್ತಾ ಈಗಾಗಲೇ ಜನರ ಹಾಗೂ ರೈತರು ಪೆಟ್ರೋಲ್ ಡಿಸೇಲ್ ಅಡುಗೆ ಅನಿಲದ ಧರ ಹೆಚ್ಚಳಿಕೆ ಯಿಂದ ತತ್ತರಿಸುತ್ತಿದ್ದಾರೆ. ಆದರೆ ಇದೀಗ ರಸಗೊಬ್ಬರದ ಬೆಲೆ ಏರಿಕೆ ರೈತರು ದಂಗಾಗಿದ್ದಾರೆ ಈ ಮುಂಗಾರು ಪ್ರಾರಂಭವಾಗಿಲ್ಲದ್ದ ರಿಂದ ರೈತರಿಗೆ ನೇರವಾಗಿ ಬಿಸಿ ತಟ್ಟುವುದಿಲ್ಲವೆಂದು ಮತ್ತು ರೈತರ ಅಷ್ಟಾಗಿ ಆಕ್ರೋಶಗೊಳ್ಳುವುದಿಲ್ಲ ಎಂದೇ ಸರ್ಕಾರ ಯೋಚಿಸಿ ಈ ರಸಗೊಬ್ಬರದ ಬೆಲೆ ದುಪಟ್ಟು ಮಾಡಿದೆ, ಆದ್ದರಿಂದ ರೈತರು ಈಗಿನಿಂದಲೇ ಹಚ್ಚೆತ್ತುಕೊಳ್ಳ ಬೇಕಾಗಿದು ಇದರ ವಿರುದ್ಧ ಜಿಲ್ಲಾಯಾದ್ಯಂತ ಜೂನ್ 21 ಕ್ಕೆ ಪ್ರತಿಭಟನೆಗೆ ಮುಂದಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ರಾಯಚೂರು ಜಿಲ್ಲಾ ಅಧ್ಯಕ್ಷ ಅಶೋಕ ನಿಲೋಗಲ್, ತಾಲೂಕ ಅದ್ಯಕ್ಷ ಮುದುಕಪ್ಪ ನಾಯಕ, ಆನಂದ ಭೋವಿ, ಬೂದೇಪ್ಪ ಮೀಟ್ಟೆಕ್ಯಾಂಪ್,ಹನುಮಂತ, ದಿಲೀಪ್ ಟೇಲರ್ ಮಾನವಿ,ದೇವಣ್ಣ ನಾಯಕ ಕೆ.ಗುಡದಿನ್ನಿ, ಮುರ್ತುಜಾಮಾನವಿ,ಬಾಟ,ವೆಂಕಟೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.