ಕೊಲ್ಹಾರ: ತಾಲ್ಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರ ಸ್ಥಾಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರ ರೇಣುಕಾ ಎಂ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕ ಅಧ್ಯಕ್ಷ ಸೋಮು ಬಿರಾದಾರ ಮಾತನಾಡುತ್ತಾ ಮಟ್ಟಿ ಹಾಳ ಗ್ರಾಮಸ್ಥರು ಪಡಿತರ ಆಹಾರ ಧಾನ್ಯ ತರಲು ಪಕ್ಕದ ನಾಗರದಿನ್ನಿ ಗ್ರಾಮಕ್ಕೆ ತೆರಳಬೇಕಾಗುತ್ತದೆ ಇದರಿಂದ ಮಟ್ಟಿಹಾಳ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದ್ದು ತಾಲ್ಲೂಕ ದಂಡಾ ಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಮಟ್ಟಿಹಾಳ ಗ್ರಾಮಕ್ಕೆ ಪಡಿತರ ವಿತರಣಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಮಹಿಳೆಯರು ಮಾತನಾಡುತ್ತಾ ನಾಗರದಿನ್ನಿ ಗ್ರಾಮದಲ್ಲಿ ಸಮರ್ಪಕ ಪಡಿತರ ಆಹಾರ ವಿತರಣೆ ಮಾಡುತ್ತಿಲ್ಲ. ಪಡಿತರ ಚೀಟಿ ಪಡೆಯಲು ಸುಖಾಸುಮ್ಮನೆ ಅಲೆಸುತ್ತಾರೆ ಸರ್ವರ್ ಇಲ್ಲ ಅನ್ನುವ ಕಾರಣ ನೀಡುವ ಮೂಲಕ ಅಲೆದಾಡಿಸುತ್ತಾರೆ ಬರುವ ಪಡಿತರ ಆಹಾರ ಧಾನ್ಯವನ್ನು ತಿಂಗಳಲ್ಲಿ ಮೂರು ದಿನಗಳನ್ನು ಮಾತ್ರ ವಿತರಿಸಿ ಅವದಿ ಮುಗಿಯಿತು ಎನ್ನುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಹಾಗಾಗಿ ಅಧಿಕಾರಿಗಳು ಕೂಡಲೇ ಮಟ್ಟಿಹಾಳ ಗ್ರಾಮಕ್ಕೆ ಪ್ರತ್ಯೇಕ ಪಡಿತರ ಆಹಾರ ವಿತರಣಾ ಕೇಂದ್ರ ಪ್ರಾರಂಭಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು