Saturday, 30th September 2023

ಖಾಸಗಿ ಶಾಲೆ,ಕಾಲೇಜುಗಳಿಗೂ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ: ಆರ್.ಬಿ ಹೊಸೂರ

ಇಂಡಿ: ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯ,ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪರಿಗಣಿಸಿದರೆ ಮತ್ತಷ್ಟು ಖಾಸಗಿ ಶಿಕ್ಷಕರಿಗೆ ಶೈಕ್ಷಣಿಕ ಬೆಳವಣಿಗೆಗೆ ಪುಷ್ಠಿಕೊಟ್ಟಂತಾಗುತ್ತದೆ ಎಂದು ಶಿವ ಯೋಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಾಲೋಟಗಿ ಮುಖ್ಯಗುರು ಆರ್.ಬಿ ಹೊಸೂರ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರಕಾರ ಪ್ರತಿವರ್ಷ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ರಿಗೆ ರಾಜ್ಯ ಮಟ್ಟ .ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ವೇತನ ಪಡೇದು ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ಯಾವುದೇ ಪ್ರಶಸ್ತಿ ನೀಡದೆ ಮಲತಾಯಿ ಧೋರಣೆ ಅನುಸರಿಸು ತ್ತಿರುವ ಸರರ್ಕಾರದ ಕ್ರಮ ಖಂಡನಿಯ.

ಖಾಸಗಿ ಶಾಲಾ, ಕಾಲೇಜುಗಳು ಪಾಠಪ್ರವಚನ, ಕ್ರೀಡಾಕೂಟ, ಆಟಗಳಲ್ಲಿ ಹಾಗೂ ಎಸ್.ಎಸ್.ಎಲ್.ಸಿ ,ಪಿ.ಯು.ಸಿ. ಪರೀಕ್ಷೆಗಳಲ್ಲಿ ವಿಧ್ಯಾರ್ಥಿಗಳ ಸಾಧನೆ ಮೇಲುಗೈ ಇದಕ್ಕೆ ಶಿಕ್ಷಕರ ಶ್ರಮ ಎಂದರೆ ತಪ್ಪಾಗಲಾರದು.

ಪ್ರತಿಯೊಂದು ಹಂತದಲ್ಲಿ ಸರಕಾರದ ನಿಯಗಳ ಅಡಿಯಲ್ಲಿ ನಡೇಯಬೇಕು ಎಂಬ ಮಾನದಂಡವಿರುವ ಖಾಸಗಿ ಶಾಲೆಗಳಿಗೆ ಮಲತಾಯಿ ಧೋರಣೆ ಸಲ್ಲದು.ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ಕೊಡ ಮಾಡುವ ಆದರ್ಶ ಶಿಕ್ಷಕ ಪ್ರಶಸ್ತಿ ಕೊಟ್ಟು ಗೌರವಿಸಿ ದರೆ ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ನಿರ್ವಹಿ ಸಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!