Friday, 13th December 2024

Reliance Jio: ರಿಲಯನ್ಸ್ ಜಿಯೋದಿಂದ ಹೊಸ ಐಎಸ್‌ಡಿ ಪ್ಲಾನ್ಸ್ ಘೋಷಣೆ; 39 ರೂ.ನಿಂದ ಆರಂಭ!

Reliance Jio

ಬೆಂಗಳೂರು: ರಿಲಯನ್ಸ್ ಜಿಯೋ ಕಂಪನಿಯು (Reliance Jio) ತನ್ನ ಗ್ರಾಹಕರಿಗೆ ಹೊಸ ಅಂತಾರಾಷ್ಟ್ರೀಯ ಪ್ಯಾಕ್‌ಗಳನ್ನು ಘೋಷಿಸಿದೆ. ನಿರ್ದಿಷ್ಟ ದೇಶಗಳಿಗೆ ಅನ್ವಯಿಸುವಂತೆ 39 ರೂ.ಗಳಿಂದ ಆರಂಭವಾಗುವ ಪ್ರೀ-ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್‌ನ ಹೊಸ ಐಎಸ್‌ಡಿ ಪ್ಯಾಕ್‌ಗಳನ್ನು ನೀಡಿದ್ದು, ಈ ಎಲ್ಲಾ ಯೋಜನೆಗಳು 7 ದಿನಗಳ ವ್ಯಾಲಿಡಿಟಿ ಹೊಂದಿರಲಿವೆ.

ಯುಎಸ್‌ಎ ಮತ್ತು ಕೆನಡಾ ದೇಶಗಳಿಗೆ 39 ರೂ. ದರದ ಐಎಸ್‌ಡಿ 7 ದಿನಗಳ ವ್ಯಾಲಿಡಿಟಿಯ ಪ್ಲಾನ್ ನೀಡಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ 30 ನಿಮಿಷಗಳ ಕರೆ ಸೌಲಭ್ಯ ಇರಲಿದೆ. ಅದೇ ರೀತಿ ಯುಎಇ, ಸೌದಿ ಅರೇಬಿಯಾ, ಕುವೈತ್, ಟರ್ಕಿ ಮತ್ತು ಬಹ್ರೇನ್ ದೇಶಗಳಿಗೆ 99 ರೂ. ಪ್ಲಾನ್‌ನಲ್ಲಿ 10 ನಿಮಿಷಗಳ ಕರೆ ಸೌಲಭ್ಯ ಲಭ್ಯವಿರಲಿದೆ. ಸಿಂಗಪುರ, ಥಾಯ್ಲೆಂಡ್, ಮಲೇಷ್ಯಾ ಮತ್ತು ಹಾಂಗ್‌ಕಾಂಗ್‌ಗೆ ಕರೆ ಮಾಡುವವರಿಗೆ 15 ನಿಮಿಷಗಳ ಕರೆ ಸೌಲಭ್ಯ ಇರುವ 59 ರೂ. ಯೋಜನೆ ನೀಡಲಾಗಿದೆ.

ಇನ್ನು ಚೀನಾ, ಜಪಾನ್, ಭೂತಾನ್‌ಗೆ 15 ನಿಮಿಷಗಳ ಕರೆ ಸೌಲಭ್ಯದ 89 ರೂ. ಪ್ಲಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗೆ 69 ರೂ. ಬೆಲೆಯ 15 ನಿಮಿಷಗಳ ಕರೆ, ಬಾಂಗ್ಲಾದೇಶಕ್ಕೆ 49 ರೂ. ಬೆಲೆಯ 20 ನಿಮಿಷಗಳ ಕರೆ ಹಾಗೂ ಯುಕೆ, ಜರ್ಮನಿ, ಫ್ರಾನ್ಸ್ ಮತ್ತು ಸ್ಪೇನ್‌ಗೆ 10 ನಿಮಿಷಗಳ ಕರೆ ಸೌಲಭ್ಯದ 79 ರೂ. ಪ್ಲಾನ್ ನೀಡಲಾಗಿದೆ. ಈ ಹೊಸ ಐಎಸ್‌ಡಿ ರಿಚಾರ್ಜ್ ಪ್ಲಾನ್‌ಗಳು ಅಕ್ಟೋಬರ್ 10 ರಿಂದ ಜಾರಿಯಾಗಿವೆ.

ಈ ಸುದ್ದಿಯನ್ನೂ ಓದಿ | WhatsApp Update: ಕಡಿಮೆ ಬೆಳಕಲ್ಲೂ ಉತ್ತಮ ಗುಣಮಟ್ಟದ ವಿಡಿಯೊ ಕಾಲ್‌ ಮಾಡುವುದು ಹೇಗೆ? ಬಂದಿದೆ ಹೊಸ ಫೀಚರ್‌