Sunday, 10th November 2024

ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಸಂತೋಷದ ವಿಷಯ

ಇಂಡಿ: ಸಿದ್ಧಾಂತ ಶಿಖಾಮಣಿಯಂತಹ ಮಹಾನ ಗ್ರಂಥವನ್ನು ಕೂಡುಗೆಯಾಗಿ ಅವರು ನೀಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ತಹಶೀಲ್ದಾರ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಮಿನಿವಿಧಾನ ಸೌಧ ಆವರಣದಲ್ಲಿ ಹಮ್ಮಿಕೊಂಡ ತಾಲೂಕ ಆಡಳಿತ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಮಹೋತ್ಸವ ದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥ ವಚನ ಸಾಹಿತ್ಯದಲ್ಲಿ ತತ್ವ ಸಾರಾಂಶ- ವಿಮರ್ಶೆ ಇದಾಗಿದೆ ಎಂದರು.

ಜಿಲ್ಲಾ ಜಂಗಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಹಾಗೂ ಇಂಡಿ ತಾಲೂಕು ಜಂಗಮ ಸಮಾಜದ ಹಿರಿಯ ನ್ಯಾಯವಾದಿ ಎಸ್. ಎಲ್. ನಿಂಬರಗಿಮಠ ಮಾತನಾಡಿ, ಸಾಮರಸ್ಯ, ಸಹಬಾಳ್ವೆ ಸೌಹಾರ್ದತೆ ಬದುಕನ್ನು ಅವರು ಬೋಧಿಸಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಇವರು ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ್ದಾರೆ. ಈ ಕಲಿಯುಗದಲ್ಲಿ ಮಾನವನ ಆಸೆ, ಅಸೊಹೆಗಳನ್ನು ತಡೆದು ಹಾಕಿ ಸಮಾಜದ ಒಳತಿಗಾಗಿ ಬದುಕಬೇಕು.

ಧರ್ಮವನ್ನು ರಕ್ಷಣೆ ಮಾಡುವವರು ನಾವು, ಆದರೆ ಧರ್ಮದ ನಮ್ಮನ್ನು ರಕ್ಷಣೆ ಮಾಡುವಂತೆ ಪರಸ್ಥಿತಿ ನಿರ್ಮಾಣ ವಾಗಿದೆ. ಜ್ಯೋತಿ ಸ್ವರೂಪಿಯಾದ ಜಗದ್ಗುರು ರೇಣುಕಾಚಾರ್ಯರು ಸಮಾಜದ ಬದಲಾವಣೆ ಗಳಿಗೆ ಸಂದೇಶಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಪತ್ರಕರ್ತ ಶಿವಯ್ಯ ಹಿರೇಪಟ್ಟ ಮಾತನಾಡಿ ಜಂಗಮರ ಸಂಸ್ಥಾಪಕರಾದ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರ ಆದೇಶದ ಪ್ರಕಾರ ನಮ್ಮ ಇಂಡಿ ಪಟ್ಟಣದ ಮಿನಿವಿಧಾನ ಸೌಧದಲ್ಲಿ ಆಚರಣೆ ನಾಗಯ್ಯ ಹಿರೇಮಠ ಸಮ್ಮಖದಲ್ಲಿ ಆಚರಿಸಿ ಅದೇ ರೀತಿ ಈ ನಮ್ಮ ರೇಣುಕಾಚಾರ್ಯ ಜಯಂತಿ ಯಲ್ಲಿ ಸರ್ವ ಧರ್ಮದವರಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಮುರುಗೇಂದ್ರ ಶಿವಾಚಾರ್ಯರು ಅಥರ್ಗಾ, ಮಲ್ಲಿಕಾರ್ಜುನ ಶಿವಚಾರ್ಯರು ಅಹಿರಸಂಗ ಆಶೀರ್ವಚನ ನೀಡಿದರು.

ಶಿವಯೋಗಿ ರೂಗಿಮಠ, ಶಿವಯ್ಯ ಮಠಪತಿ,ಷಡಕ್ಷರಿ ಹಿರೇಮಠ, ಎಸ್.ಎಸ್. ಸ್ವಾಮಿ, ಸಿ.ಜಿ.ಹಿರೇಮಠ, ಶ್ರೀಕಾಂತ ಕೂಡಿಗನೂರ, ಅಜೀತ ಹಿರೇಮಠ, ಪ್ರವೀಣ ಹಿರೇಮಠ, ಸೊಮು ಹಿರೇಮಠ, ಎಸ್.ಎಸ್.ಗಾಳಿಮಠ,ಧಾನಯ್ಯ ಹಿರೇಮಠ, ಸುಭಾಸ ಹಿರೇಮಠ, ಬಸವರಾಜ ಪತ್ರಿಮಠ, ಶಾಂತಯ್ಯ ಹಿರೇಮಠ, ಪ್ರವೀಣ ಹಿರೇಮಠ ಸೇರಿದಂತೆ ಅನೇಕರು ಇದ್ದರು.