ಬೆಂಗಳೂರು: ಲವ್ ಜಿಹಾದ್ (Love jihad)ನ ಕಬಂದ ಬಾಹು ಎಲ್ಲೆಡೆ ಚಾಚಿದೆ. ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಇದರ ಬಲಿಪಶುಗಳಾಗಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ 2024ರ ಮಿಸೆಸ್ ಇಂಡಿಯಾ ಗ್ಯಾಲಕ್ಸಿ (Mrs. India Galaxy 2024) ಕಿರೀಟ ಮುಡಿಗೇರಿಸಿಕೊಂಡಿರುವ ರಿನಿಮಾ ಬೋರಾ (Rinima Borah). ಅನ್‌ಟೋಲ್ಡ್ ಪಾಡ್‌ಕ್ಯಾಸ್ಟ್ (UNTOLD Podcast)ಗೆ ರಿನಿಮಾ ಬೋರಾ ಸಂದರ್ಶನ ನೀಡಿದ್ದು, ಇದರಲ್ಲಿ ತಾವು ಎದುರಿಸಿದ ಲವ್ ಜಿಹಾದ್‌ನ ಕಹಿ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅವರ ಮೊದಲ ಪ್ರಿಯಕರ, ಮುಸ್ಲಿಂ ಯುವಕ ನೀಡಿದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ಅಸ್ಸಾಂನಲ್ಲಿ ಜನಿಸಿದ ರಿನಿಮಾ ಬೋರಾ ಅವರು ತಮ್ಮ 16ನೇ ವಯಸ್ಸಿನಲ್ಲಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಪರಿಚಯವಾದ ಮುಸ್ಲಿಂ ಯುವಕ ಮತ್ತು ಆತನ ಕುಟುಂಬಸ್ಥರು ನೀಡಿದ ಕಿರುಕುಳವನ್ನು ವಿವರಿಸಿದ್ದಾರೆ. ಸದ್ಯ ಅವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Assam’s Rinima Borah is Mrs India Galaxy, will represent India at Mrs Galaxy 2025.
— aboyob bhuyan (@aboyobbhuyan) November 8, 2024
She joined us in the Podcast – and opened about how she was a victim of ‘Love Jihad’.
OPEN, NO HESITATION & DIRECT episode. pic.twitter.com/3GgtRyAjzt
ರಿನಿಮಾ ಬೋರಾ ಹೇಳಿದ್ದೇನು?
ʼʼಕಳೆದ 16 ವರ್ಷಗಳಿಂದ ನಾನು ಒಂದು ರೀತಿಯ ಹಿಂಸೆ ಅನುಭವಿಸುತ್ತಿದ್ದೆ. ಇದರಿಂದ ಹೊರ ಬರಲು ನನಗೆ ವರ್ಷಗಳೇ ಬೇಕಾಗಬಹುದು. ಈಗ ಪ್ರತಿ ದಿನವೂ ನನಗೆ ನಾನೇ ಆ ಕೆಟ್ಟ ದಿನಗಳು ಕಳೆದು ಹೋಯಿತು ಎಂದು ಹೇಳಿಕೊಳ್ಳುತ್ತೇನೆ. ಈ ಪರಿಸ್ಥಿತಿಗೆ ನೀನೆ ಕಾರಣ. ಇದೇ ಕಾರಣಕ್ಕೆ ಇಂದಿಗೂ ಒದ್ದಾಡುವಂತಾಗಿದೆ ಎಂದು ಕೆಲವರು ಹೇಳುತ್ತಾರೆ. 16ನೇ ವಯಸ್ಸಿನಲ್ಲಿ ನಾನು ಶಿಕ್ಷಣಕ್ಕಾಗಿ ಅಸ್ಸಾಂನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ಮುಸ್ಲಿಂ ಯುವಕನೊಂದಿಗೆ ಸಲುಗೆ ಬೆಳೆಯಿತು. ನಾನು ಆರಂಭದಲ್ಲಿ ಹೆತ್ತವರಂತೆ, ಆತನೂ ನನ್ನ ಒಳಿತಿಗಾಗಿ ನಿಂದಿಸುತ್ತಿದ್ದಾನೆ ಎಂದೇ ಭಾವಿಸಿದ್ದೆ” ಎಂದು ರಿನಿಮಾ ಬೋರಾ ನೆನಪಿಸಿಕೊಂಡಿದ್ದಾರೆ.
ʼʼಈ ವೇಳೆ ನಾನು ಆತ ನೀಡುವ ಹಿಂಸೆಯ ಕಾರಣಕ್ಕೆ ಆತನನ್ನು ತಾಲಿಬಾನ್ ಎಂದು ಕರೆಯುತ್ತಿದ್ದೆ. ಅವನು ಕ್ರೂರವಾಗಿ ನನಗೆ ಹೊಡೆಯುತ್ತಿದ್ದ. ಆತ ಬಲವಂತವಾಗಿ ಗೋಮಾಂಸ ತಿನ್ನಿಸಿದ ದಿನಗಳು ಈಗಲೂ ನೆನಪಿದೆ. ಆತನ ಪೋಷಕರು ಸಹ ಗೋಮಾಂಸ ತಿನ್ನುವಂತೆ ಬಲವಂತ ಮಾಡುತ್ತಿದ್ದರು. ಬಹುಶಃ ಇದೇ ಲವ್ ಜಿಹಾದ್ ಇರಬೇಕುʼʼ ಎಂದು ರಿನಿಮಾ ವಿವರಿಸಿದ್ದಾರೆ.
ʼʼಇಷ್ಟು ಮಾತ್ರವಲ್ಲ ಅವರು ನನ್ನ ಹೆಸರನ್ನು ಆಯೇಷಾ ಹುಸೇನ್ ಎಂದು ಬದಲಾಯಿಸಿದ್ದರು. ನನಗೆ ಇಷ್ಟವಿಲ್ಲದಿದ್ದರೂ ನಮಾಜ್ ಮಾಡಲು ಒತ್ತಡ ಹೇರಲಾಗುತ್ತಿತ್ತು. ಯಾವಾಗ ಆತ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಲು ಆರಂಭಿಸಿದನೋ ಆಗಿನಿಂದ ಆತನ ಜತೆಗಿನ ಸಂಬಂಧ ಕಳೆದುಕೊಳ್ಳಲು ನಿರ್ಧರಿಸಿದೆ. ಅಂತಿಮವಾಗಿ ಆತನಿಂದ ದೂರ ಬಂದು ಹೊಸ ಜೀವನ ಆರಂಭಿಸಿದೆʼʼ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Love Jihad: ಮುಸ್ಲಿಂ ಯುವಕನ ಲವ್ ಜಿಹಾದ್‌ನಿಂದ ಮಗಳನ್ನು ಕಾಪಾಡಿ: ದೇವರಿಗೆ ಪತ್ರ ಬರೆದ ಹಿಂದೂ ಯುವತಿಯ ತಾಯಿ
ಸದ್ಯ ಈ ಎಲ್ಲ ಕಹಿ ಅನುಭವಗಳನನು ಮೆಟ್ಟಿ ನಿಂತ ಅವರು ಮಿಸೆಸ್ ಇಂಡಿಯಾ ಗ್ಯಾಲಕ್ಸಿ 2024 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಮಹಿಳಾ ಸಶಕ್ತೀಕರಣಕ್ಕೆ ಉದಾಹರಣೆ ಎನಿಸಿಕೊಂಡಿದ್ದಾರೆ. ಇದೇ ರೀತಿಯ ಕಹಿ ಅನುಭವ ಎದುರಿಸಿದ ಅನೇಕ ಮಹಿಳೆಯರಿಗೆ ಭರವಸೆಯ ಸಂಕೇತವಾಗಿ ಹೊರಹೊಮ್ಮಿದ್ದಾರೆ.
ವಿಶ್ವವಾಣಿ ಟಿವಿ ಫೇಸ್‌ಬಕ್ ಪೇಜ್ ಫಾಲೋ ಮಾಡಿ