Wednesday, 11th December 2024

Road Accident: ಬೀದರ್‌ನಲ್ಲಿ ಬಸ್ -ಬೈಕ್ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ದುರ್ಮರಣ

Gadag News

ಬೀದರ್: ಬೀದರ್‌ನಲ್ಲಿ ಬಸ್‌-ಬೈಕ್‌ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಬೈಕ್‌ನಲ್ಲಿ ತೆರಳುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Road Accident) ಬೀದರ್‌ನ ದೇವವನ ಎಂಬಲ್ಲಿ ನಡೆದಿದೆ. ಮೃತರು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಗಣೇಶಪುರದ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ದಂಪತಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಗಣೇಶ್ ಪುರ ಗ್ರಾಮದ ಜಗನ್ನಾಥ (35),ರೇಣುಕಾ (35), ವಿನೋದ್ ಕುಮಾರ್ (14) ಸೇರಿ ನಾಲ್ವರು ಮೃತರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೀದರ್‌ನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ | Shivamogga News: ಎಸ್ಕೇಪ್‌ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿ ಬಂಧನ

ಜಮೀನಿನಲ್ಲಿ ಕೆಲಸ‌ ಮುಗಿಸಿಕೊಂಡು ಮನೆಗೆ ವಾಪಸ್ ಆಗುವ ವೇಳೆ ಅಪಘಾತವಾಗಿದೆ. ಹೈದರಾಬಾದ್‌ನಿಂದ ಬೀದರ್ ಕಡೆಗೆ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ನಾಲ್ವರು ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ಮತ್ತು ಬಸ್‌ ಮುಖಾಮುಖಿಯಾಗಿ ಈ ದುರಂತ ಸಂಭವಿಸಿದೆ.