Thursday, 12th December 2024

Road Accident: ಏರ್​ಪೋರ್ಟ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ, ಇಬ್ಬರ ದುರ್ಮರಣ

road accident airport road

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru International Airport) ರಸ್ತೆಯಲ್ಲಿರುವ ಮೇಲ್ಸೇತುವೆ ಬಳಿ ನಿನ್ನೆ ತಡರಾತ್ರಿ ಭೀಕರ ಸರಣಿ ರಸ್ತೆ ಅಪಘಾತ (road accident) ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನೋವಾ ಕಾರಿಗೆ ಮೊದಲು ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಹೀಗಾಗಿ ಇಬ್ಬರೂ ವಾಹನ ನಿಲ್ಲಿಸಿಕೊಂಡು ಗಲಾಟೆ ಮಾಡುತ್ತಿದ್ದರು. ಇದೇ ವೇಳೆ ಅತಿ ವೇಗವಾಗಿ ಬಂದ ಬಿಎಂಟಿಸಿ ವೋಲ್ವೊ ಬಸ್, ಲಾರಿಗೆ ಗುದ್ದಿದೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟಿರುವ ವ್ಯಕ್ತಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಯಲಹಂಕ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಎಂಟಿಸಿ ವೋಲ್ವೊ ಬಸ್ ಲಾರಿಗೆ ಗುದ್ದಿದ ರಭಸಕ್ಕೆ ಮುಂದಿನ ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಹೋಗಿದೆ. ಫ್ಲೈಓವರ್​​ ಮೇಲೆ ಅಪಘಾತವಾಗಿ ನಿಂತಿರುವ ಇನೋವಾ ಕಾರು, ಸಿಮೆಂಟ್ ಲಾರಿ, ವೋಲ್ವೋ ಬಿಎಂಟಿಸಿ ಬಸ್‌ನ್ನು ಇದೀಗ ಕ್ರೇನ್ ಮೂಲಕ ತೆರವುಗೊಳಿಸಲಾಗುತ್ತಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಸಂಚಾರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Self Harming: ಕೈಗಾ ಅಣುಸ್ಥಾವರದ ಅಧಿಕಾರಿ ಪಿಸ್ತೂಲ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ