Saturday, 14th December 2024

ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರಿ: ರೂಪಾ ಹಾಗೂ ಸಿಂಧೂರಿಗೆ ನೋಟಿಸ್ ನಲ್ಲಿ ಎಚ್ಚರಿಕೆ

ಬೆಂಗಳೂರು: ನೀವು ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪ ಮಾಡಿದ್ದು ಸರಿಯಲ್ಲ. ಇಬ್ಬರು ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧ ರಾಗಿರುವಂತೆ ರಾಜ್ಯ ಸರ್ಕಾರ ರೂಪಾ ಹಾಗೂ ಸಿಂಧೂರಿಗೆ ನೋಟಿಸ್ ನಲ್ಲಿ ಖಡಕ್ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಿಎಂ ಬೊಮ್ಮಾಯಿ ಅವರ ಸೂಚನೆ ಮೇರೆಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಐಪಿಎಸ್ ರೂಪ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ಅವರಿಗೆ ನೀಡಿರುವ ನೋಟಿಸ್ ನಲ್ಲಿ ನಿಮ್ಮ ದೂರು ಗಳನ್ನು ಸರ್ಕಾರದ ಮುಂದೆ ಹೇಳಿ. ಅದರನ್ನು ಬಿಟ್ಟು ಬಹಿರಂಗವಾಗಿ ಆರೋಪ-ಪ್ರತ್ಯಾರೋಹ ಮಾಡುತ್ತಿರೋ ದಕ್ಕೆ ಆಕ್ಷೇಪವನ್ನು ವ್ಯಕ್ತ ಪಡಿಸಿದೆ.

ನಿಮ್ಮ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ ತಂದಿದೆ. ಇಬ್ಬರು ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರ ಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ.