Friday, 13th December 2024

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸುಚಿತ್ರ ದೊಡ್ಡಮನಿ ಅವಳಿಗೆ ಆರ್‌ಪಿಐ ವತಿಯಿಂದ ಸನ್ಮಾನ

ಇಂಡಿ: ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ತಾಲೂಕಿನ ನಾದ ಕೆಡಿ ಗ್ರಾಮದ ಕುಮಾರಿ ಸುಚಿತ್ರ ಲಕ್ಷ್ಮಣ ದೊಡ್ಡಮನಿ ಹಾಗೂ ನಾದ ಕೆಡಿ ಗ್ರಾಪಂ ಗೆ ನೂತನವಾಗಿ ಆಯ್ಕೆಯಾಗಿರುವ ಗ್ರಾಪಂ ಅಧ್ಯಕ್ಷ ಸಿದ್ದರಾಯ ಐರೋಡಗಿ, ಉಪಾಧ್ಯಕ್ಷ ಸೋಮಶೇಖರ ಮ್ಯಾಕೇರಿ, ಪಿಡಿಒ ಲೋಣಿ ಅವರನ್ನು ಆರ್‌ಪಿಐ ಪಕ್ಷದ ಅಧ್ಯಕ್ಷ ನಾಗೇಶ ತಳಕೇರಿ ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು.

ಈ ಸಂರ‍್ಭದಲ್ಲಿ ಡಿಎಸ್‌ಎಸ್‌ ಸಂಘಟನಾ ಸಂಚಾಲಕ ರಾಮಚಂದ್ರ ದೊಡ್ಡಮನಿ, ಆರ್‌ಪಿಐ ಯುವ ಘಟಕದ ತಾಲೂಕು ಅಧ್ಯಕ್ಷ ಬಾಬರಾಯ ಕಾಂಬಳೆ, ವಿಶಾಲ ಮೇಲಿನಮನಿ, ಕೇದಾರ ಹರಿಜನ, ಕನ್ನಪ್ಪ ನಾದ, ಸಾತಪ್ಪ ಗುಡಿಮನಿ, ದರೇಪ್ಪ ಮಂದೋಲಿ, ಸಂಜು ಹರಿಜನ, ಲಕ್ಷ್ಮಣ ದೊಡ್ಡಮನಿ ಮೊದಲಾದವರು ಇದ್ದರು.