Wednesday, 11th December 2024

ನಾಮನಿರ್ದೇಶಿತ ಸದಸ್ಯರಿಗೆ ಸನ್ಮಾನ

ಕೊಲ್ಹಾರ: ಕೊಲ್ಹಾರ ಪಟ್ಟಣ ಪಂಚಾಯತ್ ನೂತನ ನಾಮನಿರ್ದೇಶಿತ ಸದಸ್ಯರಾಗಿ ನೇಮಕರಾದ ಲಕ್ಷ್ಮಣ ಬ್ಯಾಲ್ಯಾಳ, ಸುರೇಶ ಏಳಂಗಡಿ, ಶಿವಾನಂದ ಪತಂಗಿ ಇವರನ್ನು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಪಟ್ಟಣದಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಚಿನ್ನಪ್ಪ ಗಿಡ್ಡಪ್ಪಗೋಳ, ಪ.ಪಂ ಸದಸ್ಯರಾದ ಬಾಬು ಬಜಂತ್ರಿ, ಅಪ್ಪಾಸಿ ಮಟ್ಯಾಳ ಸಹಿತ ಅನೇಕರು ಇದ್ದರು.