Saturday, 14th December 2024

ದಿಶಾ ಸಮಿತಿ ಸದಸ್ಯರನ್ನಾಗಿ ನೇಮಕ

ಇಂಡಿ : ಸಂಸದ ರಮೇಶ ಜಿಗಜಿಣಗಿ ಅವರ ಒಡನಾಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಭೀಮರಾಯ ಮದರಖಂಡಿ ಅವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ದಿಶಾ ಸಮಿತಿ ಸದಸ್ಯರನ್ನಾಗಿ ನೇಮಕವಾಗಿದ್ದಾರೆ.

ಸುಮಾರು ೪೦ ವರ್ಷಗಳಿಂದ ಸಂಸದ ರಮೇಶ ಜಿಗಜಿಣಗಿ ಅವರ ಒಡನಾಡಿಯಾಗಿ ರಾಜಕಾರಣ ಮಾಡಿದ್ದೇನೆ. ನನ್ನ ಮೇಲಿನ ಅಭಿಮಾನದಿಂದ ನನಗೆ ದಿಶಾ ಸಮಿತಿ ಸದಸ್ಯನನ್ನಾಗಿ ನೇಮಕ ಮಾಡಲು ಕಾರಣಿಕರ್ತವಾದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿನಂದಿಸುವುದಾಗಿ ಭೀಮರಾಯ ಮದರಖಂಡಿ ಹೇಳಿದರು.