Saturday, 14th December 2024

ಮತಕ್ಷೇತ್ರದ ಪದಾಧಿಕಾರಿಗಳ ಆಯ್ಕೆ

ಇಂಡಿ: ಬಹುಜನ ಸಮಾಜ ಪಾರ್ಟಿ- ಕರ್ನಾಟಕ ರಾಜ್ಯ, ಇಂಡಿ ವಿಧಾನಸಭಾ ಮತಕ್ಷೇತ್ರದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯ ಇಂದು ಪ್ರವಾಸಿ ಮಂದಿರದಲ್ಲಿ ಜರಗಿತ್ತು.

ತಾಲೂಕಾ ಅಧ್ಯಕ್ಷರಾಗಿ ಕಾಶೀಮಸಾಬ ನಿಂಬರಗಿಯವರನ್ನು ಜಿಲ್ಲಾ ಕಾರ್ಯದರ್ಶೀ ಯಾಗಿ ಖಾದೀರ್ ಮೋಮಿನ್, ಪ್ರಧಾನ ಕಾರ್ಯದರ್ಶಿ ಸಾಗರ ಕಾಳೆ, ಖಚಾಂಚಿ ಕೇತನ ಕಾಲೇಬಾಗ, ಉಪಾಧ್ಯಕ್ಷ ಗಂಗಾಧರ ಕಾಂಬಳೆ, ಕಚೇರಿ ಕಾರ್ಯದರ್ಶಿ ಸಮೀರ ಅರಬ್ ಸಂಘಟನಾ ಕಾರ್ಯದರ್ಶಿ ಸಾಧಿಕ್ ಮುಜಾವರ್, ಅಬ್ದುಲ್‌ಸೈಯದ್ ಹಾಗೂ ಬಿವಿಏಫ್‌ನ ತಾಲೂಕಾ ಅಧ್ಯಕ್ಷರಾಗಿ ಸಿಧ್ಧಾರ್ಥ ಮೂರಮನ್ ಇವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ,ದಸ್ತಗೀರ ಮುಲ್ಲಾ, ಕೆ.ಆರ್ ತೋರವಿ ಜಿಲ್ಲಾಧ್ಯಕ್ಷ ಹನುಮಂತ ಬೊಮ್ಮನ ಜೋಗಿ ನೈತೃತ್ವದಲ್ಲಿ ನೇಮಕ ಆದೇಶ ಮಾಡಿದ್ದಾರೆ.

ರಾಜ್ಯಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಮಾತನಾಡಿ ಬಹುಜನ ಸಮಾಜ ಪಕ್ಷ ಸ್ಥಾಪಿಸಿದ ದಾದಾಸಾಹೇಬ ಕಾನ್ಸೀ ರಾಮ್ ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದಾರೆ. ಬಹುಜನರು ರಾಜಕೀಯ ಮುಂದೆ ಬರಬೇಕು ಇಡೀ ದೇಶವಾಳುವ ಧನಿಗಳಾಗಬೇಕು ಎಂದು ಹಗಲು ರಾತ್ರಿ ಎನ್ನದೆ ಶ್ರಮಿಸಿದರ ಫಲವಾಗಿ ಉತ್ತರ ಪ್ರದೇಶದಲ್ಲಿ ೪ ಬಾರಿ ಬೆಹನ್ ಕುಮಾರಿ ಮಾಯಾವತಿ ಮುಖ್ಯ ಮಂತ್ರಿಯಾಗಿದ್ದಾರೆ.

ಕಾಂಗ್ರೆಸ್ ಬಿಜೆಪಿ ಜನತಾದಳ ದಲಿತರನ್ನು ,ಅಲ್ಪಸಂಖ್ಯಾತರನ್ನು ಓಟ ಬ್ಯಾಂಕ್‌ ಮಾಡಿಕೊ0ಡು ದೇಶವಾಳಿದ್ದಾರೆ ವಿನಹ: ಅಭಿವೃದ್ದಿಶೂನ್ಯ. ೬೦-೬೫ ವರ್ಷ ಆಳಿದ ಕಾಂಗ್ರೆಸ್.ಬಿಜೆಪಿ.ದಳ ಪಕ್ಷಗಳು ಜಾತಿ,ಧರ್ಮ ಆಧಾರದಲ್ಲಿ ಆಡಳಿತ ಮಾಡಿದೆ. ಭಾರತ ಜೋಡೋ ಯಾತ್ರೆ ಹಾಸ್ಯಾಸ್ಪದ ಇಂತಹ ರಾಜಕೀಯ ಪಕ್ಷಗಳಿಗೆ ಬುದ್ದಿಕಲಿಸಿಮುಂಬರುವ ವಿಧಾನ ಸಭೆ, ಜಿ.ಪಂ.ತಾ.ಪ0 ಸ್ಥಳೀಯ ಚುನಾವಣೆಗಳಲ್ಲಿ ತಕ್ಕಪಾಠಕಲಿಸಿ ಬಹುಜನ ಸಮಾಜ ಪಾರ್ಟಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಪ್ರಧಾನ ಕಾರ್ಯದರ್ಶಿ ನಾಗೇಶ ಶಿವಶರಣ, ಅಯ್ಯಪ್ಪಸಾತಿಹಾಳ, ರಸುಲ್ ಆಲಮೇಲ, ನೀತಿಶ ತೋರವಿ, ಸಿದ್ಧಾರ್ಥ ಹಳ್ಳದಮನಿ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.