Friday, 13th December 2024

Self Harming: ಪತ್ನಿ, 4 ವರ್ಷದ ಮಗನನ್ನು ಕೊಂದು ಆತ್ಮಹತ್ಯೆ!

Self Harming

ಮಂಗಳೂರು: ಪತ್ನಿ ಹಾಗೂ 4 ವರ್ಷದ ಮಗನನ್ನು ಕೊಂದು ವ್ಯಕ್ತಿಯೊಬ್ಬ ಬಳಿಕ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು (Self Harming) ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಪತ್ನಿ ಮತ್ತು ಮಗನನ್ನು ಕೊಂದು ನಂತರ ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾರ್ತಿಕ್ ಭಟ್ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮುಲ್ಕಿ ತಾಲೂಕಿನ ಪಕ್ಷಿಕೆರೆಯ ಫ್ಲಾಟ್‌ನಲ್ಲಿ ಈತ, ಪತ್ನಿ ಪ್ರಿಯಾಂಕಾ (28), ಪುತ್ರ ಹೃದಯ್ (4)ನನ್ನು ಭೀಕರವಾಗಿ ಕೊಲೆ ಮಾಡಿದ ಬಳಿಕ, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ತಿಕ್ ಫ್ಲ್ಯಾಟ್ ಬಳಿಗೆ ಪೊಲೀಸರು ಬಂದಾಗ ಪತ್ನಿ ಹಾಗೂ ಪುತ್ರನ ಶವ ಪತ್ತೆಯಾಗಿದೆ. ಪತ್ನಿ ಹಾಗೂ ಪುತ್ರನ ಕೊಂದು ಕಾರ್ತಿಕ್‌ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಕೌಟುಂಬಿಕ ಸಮಸ್ಯೆಯಿಂದ ಪತ್ನಿ ಮತ್ತು ಮಗನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮುಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Tipu Jayanti: ಟಿಪ್ಪು ಜಯಂತಿ ಹಿನ್ನೆಲೆ ನಾಳೆ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ; ಸರ್ಕಾರದ ವಿರುದ್ಧ ಮುಸ್ಲಿಂರ ಆಕ್ರೋಶ

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಮೂಕ ವ್ಯಕ್ತಿಯನ್ನು ಹೊಡೆದು ಕೊಂದ ಹೆಂಡತಿ-ಮಕ್ಕಳು!

ಬೀದರ್: ಮತಾಂತರ ವಿರೋಧಿಸಿ ರಾಜ್ಯದಲ್ಲಿ ಹಲವು ಹಿಂದುಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ನಡುವೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ವಿರೋಧಿಸಿದ ಮೂಕ ವ್ಯಕ್ತಿಯನ್ನು ಹೆಂಡತಿ, ಮಕ್ಕಳು ಸೇರಿ ಕೊಲೆ ಮಾಡಿರುವ ಘಟನೆ (Murder Case) ತಾಲೂಕಿನಲ್ಲಿ ನಡೆದಿದೆ.

ಬೀದರ್ ತಾಲೂಕಿನ ಸಾತೋಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವರಾಜ ಶೇರಿಕರ್ (52) ಕೊಲೆಯಾದವರು. ಕೊಲೆ ಮಾಡಿದ ಬಳಿಕ ಮೃತ ದೇಹವನ್ನು ಮನೆಯಲ್ಲೇ ಇಟ್ಟುಕೊಂಡು, ಹೆಂಡತಿ-ಮಕ್ಕಳು ಅಡುಗೆ ಮಾಡಿ ತಿಂದಿದ್ದಾರೆ ಎನ್ನಲಾಗಿದೆ.

ಮತಾಂತರಕ್ಕೆ ವಿರೋಧ ಮಾಡಿದ ಬಸವರಾಜ ಶೇರಿಕರ್ ಅವರು ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಬೇಕೆಂದು ಹೇಳಿದ್ದರು. ಅಷ್ಟೇ ಅಲ್ಲದೇ ದಸರಾ ಹಬ್ಬದಲ್ಲಿ ಪೂಜೆ ಯಾಕೆ ಮಾಡಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಬಸವರಾಜ್‌ನನ್ನು ಪತ್ನಿ, ಮಕ್ಕಳು ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದರು ಎನ್ನಲಾಗಿದೆ.

ಕ್ರೈಸ್ತ ಧರ್ಮ ಪಾಲನೆ

ಎಸ್‌ಟಿ ಸಮುದಾಯದ ಬಸವರಾಜ ಶೇರಿಕರ್ ಅವರ ಪತ್ನಿ ಹಾಗೂ ಮಕ್ಕಳು ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಮಾತು ಬರದೇ ಇದ್ದರೂ ಬಸವರಾಜ್ ಮಾತ್ರ ಮತಾಂತರವನ್ನು ವಿರೋಧಿಸುತ್ತಲೇ ಇದ್ದರು. ಇದಕ್ಕಾಗಿ ಬಸವರಾಜ್ ಅವರನ್ನ ಮಕ್ಕಳು, ಪತ್ನಿ ಮನೆಯಿಂದ ಹೊರದಬ್ಬಿದ್ದರು ಎನ್ನಲಾಗಿದೆ. ಆದರೆ ನೆನ್ನೆ ಮನೆಗೆ ಬಂದಾಗ ಕೈಕಾಲು ಕಟ್ಟಿ ಹಾಕಿ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಾಯಿ ಮತ್ತು ಮಕ್ಕಳು ಸೇರಿ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Burqa Ban in Switzerland: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿದ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ!