Friday, 13th December 2024

ನದಾಪ ಅವರ ನಿವೃತ್ತಿ ಜೀವನ ಸುಖಕರ, ಆರೋಗ್ಯಕರವಾಗಿರಲಿ

ಇಂಡಿ: ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ವೈದ್ಯರು,ಆರೋಗ್ಯ ಸಹಾಯಕರು,ಆರೊಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಶ್ರಮಿಸಬೇಕು. ೩೪ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ನದಾಪ ಅವರ ನಿವೃತ್ತಿ ಜೀವನ ಸುಖಕರ, ಆರೋಗ್ಯಕರವಾಗಿರಲಿ ಎಂದು ವೈದ್ಯಾಧಿಕಾರಿ ಡಾ.ರಾಜೇಶ ಕೊಳೆಕರ ಹೇಳಿದರು.

ಅವರು ಸೋಮವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ಎಂ.ಯು.ನದಾಪ ಅವರ ಬಿಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಸಮುದಾಯಕ್ಕೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಪ್ರಾಮಾಣಿಕ ಸೇವೆ ಮಾಡಬೇಕು. ಸೇವಾವಧಿಯಲ್ಲಿ ನದಾಪ ಅವರು ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಜೊತೆ ಅನೂನ್ಯತೆಯಿಂದ ಸೇವೆ ಸಲ್ಲಿಸುವುದರ ಜೊತೆಗೆ ಚಿಕಿತ್ಸೆಗಾಗಿ ಬರುವ ರೋಗಿ ಗಳಿಗೆ ಉತ್ತಮ ಸ್ಪಂಧನೆ ನೀಡಿರುವುದು ಶ್ಲಾಘನೀಯವಾದದ್ದು ಎಂದು ಹೇಳಿದರು.

ನದಾಪ ಅವರು ಇಲಾಖೆಗೆ ಆಧಾರಸ್ತಂಭವಾಗಿ ಕೆಲಸ ನಿರ್ವಹಿಸಿದ್ದು, ಅವರ ವೃತ್ತಿಪರತೆ ನಮಗೆಲ್ಲ ಮಾರ್ಗದರ್ಶನವಾಗಿದೆ ಎಂದರು.

ಬಿಳ್ಕೋಡುಗೆಯಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ನದಾಪ ಅವರು, ಸರ್ಕಾರಿ ವೃತ್ತಿ ಯಲ್ಲಿ ನಿವೃತ್ತಿ ಸಹಜವಾದುದು. ತಮ್ಮ ಅವಽಯಲ್ಲಿ ಅಽಕಾರಿಗಳು,ಸಿಬ್ಬಂದಿ ವರ್ಗದವರು ಪ್ರೀತಿ, ಗೌರವ ಮತ್ತು ವಿಶ್ವಾಸದಿಂದ ಹೆಚ್ಚಿನ ಸಹಕಾರ ನೀಡಿ ಉತ್ತಮ ಸೇವೆ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ಅಭಿನಂದನೆಗಳು ಎಂದು ಹೇಳಿದರು.

ಡಾ.ರಮೇಶ ರಾಠೋಡ,ಡಾ.ಪ್ರೀತಿ ಕೋಳೆಕರ, ಡಾ.ಜಗದೀಶ ಬಿರಾದಾರ,ಡಾ.ಅಮಿತ ಕೋಳೆಕರ, ಡಾ.ಭಜಂತ್ರಿ, ಡಾ.ಅನೀಲ ವಾಲಿ, ಡಾ.ವಿಕಾಸ,ಡಾ.ಪ್ರವೀಣ ರಾಠೋಡ,ಎಂ.ಯು.ನದಾಪ, ವಿಜಯಲಕ್ಷಿ÷್ಮ ಹಾದಿಮನಿ, ಲಲಿತಾ, ನಾಜೀಯಾ ಕಾಖಂಡಕಿ, ವಿಜಯಲಕ್ಷಿ÷್ಮ ಬಿರಾದಾರ, ತಹಿಸೀನ ಮೋಮಿನ, ತಾರಾ,ವಿಜಯಲಕ್ಷಿ÷್ಮ ಪೋಳ, ಬಸವರಾಜ ಢವಳಗಿ,ಅಶೋಕ ಎಂ, ಕೆ.ಬಿ.ದಶವಂತ, ವಿಜಯ ಪೋಳ, ರವಿ ಹಾದಿಮನಿ, ರವಿ ಕೊಟ್ಟಲಗಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.