ಕೊಲ್ಹಾರ: ನಡೆದಾಡುವ ದೇವರು, ಶತಮಾನದ ಸಂತ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮಕ್ಕೆ ಪಟ್ಟಣದಿಂದ ಸೂರ್ಮಾ ಹಾಗೂ ರೊಟ್ಟಿ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಲ್ಲು ದೇಸಾಯಿ ಹೇಳಿದರು.
ಪಟ್ಟಣದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಮ್ಮೆಲ್ಲರ ಆರಾಧ್ಯ ದೈವ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮ ವಿಜಯಪುರ ಜ್ಞಾನ ಯೋಗಾಶ್ರಮದಲ್ಲಿ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಬಳಗಕ್ಕೆ ಪಟ್ಟಣದಿಂದಲೂ ಅಳಿಲು ಸೇವೆ ಎಂಬಂತೆ 20 ಕ್ವಿಂಟಾಲ್ ಸೂರ್ಮಾ ಹಾಗೂ 10 ಸಾವಿರ ರೊಟ್ಟಿ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಾಡಿನ ಉದ್ದಗಲಕ್ಕೂ ಇರುವ ಲಕ್ಷಾಂತರ ಸಿದ್ದೇಶ್ವರ ಶ್ರೀಗಳ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಹಾಗಾಗಿ ಕೊಲ್ಹಾರ ಪಟ್ಟಣದಿಂದಲೂ ಭಕ್ತಿಯ ಅರ್ಪಣೆ ಎಂಬಂತೆ ಸೂರ್ಮಾ ಹಾಗೂ ರೊಟ್ಟಿಯ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿರೇಮಠದ ವೇದಮೂರ್ತಿ ಪಡದಯ್ಯ ಸ್ವಾಮೀಜಿಗಳು, ಪ ಪಂ ಸದಸ್ಯ ಸಿ ಎಸ್ ಗಿಡ್ಡಪ್ಪಗೋಳ, ಕಲ್ಲಪ್ಪ ಗಿಡ್ಡಪ್ಪಗೋಳ, ಮಲ್ಲಪ್ಪ ಗಣಿ, ಈರಣ್ಣ ಔರಸಂಗ, ನಾಗಪ್ಪ ಗಾಣಿಗೇರ, ಶಂಕರಪ್ಪ ಪತಂಗಿ, ಚನ್ನಪ್ಪ ಅಂತರಗೊಂಡ, ಬಸಪ್ಪ ಬರಗಿ, ಮಹಾದೇವ ಕಂಬಾರ್ ಹಾಗೂ ಇತರರು ಇದ್ದರು.