Friday, 20th September 2024

ಶಂಭು ಬಳಿಗಾರಗೆ ರಾಜ್ಯ ಮಟ್ಟದ ಭಾವೈಕ್ಯತಾ ಪ್ರಶಸ್ತಿ

ಕೊಲ್ಹಾರ: 20 ನೇ ಶತಮಾನದ ಸೂಫಿ ಸಂತ ಸುಪ್ರಸಿದ್ಧ ಅಲ್ ಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ ಕಾದ್ರಿ (ಅಲಾಹಬಾದ ಮೌಲಾನಾ) ಅವರ ಉರುಸಿನ ನಿಮಿತ್ಯ ಕೊಡಮಾಡುವ ಪ್ರತಿಷ್ಠಿತ ರಾಜ್ಯಮಟ್ಟದ ಅಲಾಹಬಾದ ಮೌಲಾನಾ ಭಾವೈಕ್ಯತಾ ಪ್ರಶಸ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ವಿದ್ವಾಂಸರಾದ ಶಂಭು ಬಳಿಗಾರ ಆಯ್ಕೆಯಾಗಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಿರಿಯ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ತಿಳಿಸಿದ್ದಾರೆ.

ಜಾನಪದ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತುತ್ತಾ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಶಂಭು ಬಳಿಗಾರ ಅವರಿಗೆ ಮಾರ್ಚ್ 7 ರಂದು ಪಟ್ಟಣದ ಖಾನಕಾಯೆ ಗಫಾರೀಯಾ ಆವರಣದಲ್ಲಿ ಜರುಗುವ ಭವ್ಯ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಅಲಹಾಬಾದ್ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದ್ದಾರೆ.