Wednesday, 11th December 2024

ಪುರಾಣ ಪ್ರವಚನ ಕೇಳುವುದರಿಂದ ಸರ್ವಪಾಪಗಳ ನಿವಾರಣೆ : ಶಾಂತಮಲ್ಲ ಶ್ರೀ

ಮಾನ್ವಿ : ಇಂದಿನ ಕೃತಕ ಜೀವನದ ವಾತಾವರಣದಲ್ಲಿ ಜೀವಿಸುವ ಜೀವಾತ್ಮನು ನೆಮ್ಮದಿ ಇಲ್ಲದೆ ವದ್ದಾಡುತ್ತಿದ್ದಾನೆ. ಅದಕ್ಕಾಗಿ ಶರಣರ ಸಂತರ ಶರಣೀಯರ ಮಹಾತ್ಮರ ಪುರಾಣ ಪ್ರವಚನವನ್ನು ಆಲಿಸುವುದರಿಂದ ಅವರ ಆದರ್ಶ ಜೀವನದ ಸಂದೇಶ ಗಳನ್ನು ಮೈಗೂಡಿಸಿಕೊಂಡಾಗ ನಮ್ಮಗಳ ಜೀವನ ಪಾವನಗುತ್ತದೆ ಎಂದು ರಾಯಚೂರು ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹ ನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ವಿಜಯರುದ್ರ ಮಹಾಸ್ವಾಮಿಗಳ ಮಠದಲ್ಲಿ 6ನೇ ವರ್ಷದ ಜಾತ್ರ ಮಹೋತ್ಸವ ನಿಮಿತ್ತ 12 ದಿನಗಳ ಪರಿಯಂತರವಾಗಿ ಜರುಗುವ ಮಹಾ ಶಿವಶರಣೆ ಉಡುತಡಿಯ ಅಕ್ಕಮಹಾದೇವಿಯ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕರೆಗುಡ್ಡ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು.

ಮುಖ್ಯ ಅತಿಥಿಗಳಾಗಿ ಶರಣಯ್ಯ ತಾತ ,ಸೂಗುರಯ್ಯ ಸ್ವಾಮಿ ಆರ್ ಎಸ್ ಮಠ, ಬಸಯ್ಯ ಸ್ವಾಮಿ ಬಲ್ಲಟಿಗಿ ಮಠ, ಮಲ್ಲಿನ ಮುಡುಗು ರಾಘವೇಂದ್ರ ನಾಯಕ್ ಮತ್ತು ಅಮರೇಗೌಡ ಪೊಲೀಸ್ ಪಾಟೀಲ್, ಹೊಸಗೌಡ್ರ ರಾಜಪ್ಪಗೌಡ್ರು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಪುರಾಣ ಪ್ರವಚನವನ್ನು ಮಾಡಿದ ಅಖಂಡೇಶ್ವರ ಶಾಸ್ತ್ರಿಗಳು ಗುಡದನಾಳ, ಅಮರೇಶ ಗವಾಯಿ ಕರೇಗುಡ್ಡ, ತಬಲ ಸಾಥ್ ಆರ್.ಪಿ. ಮಲ್ಲಿನಾಥಸ್ವಾಮಿ ಹಳ್ಳಿಮಠ ಜಾನೇಕಲ್, ಸ್ವಾಗತವನ್ನು ಆನಂದಯ್ಯಸ್ವಾಮಿ ನೆರವೇರಿಸಿದರು, ಹಾಗೂ ಗ್ರಾಮದ ಶ್ರೀ ನೀಲಪ್ಪ ಗೌಡರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.