ಇಂಡಿ: ೧೨ ನೇ ಶತಮಾನದ ಸಾಮಾಜಿಕ, ಧಾರ್ಮಿಕ ಸುಧಾರಣಾ ಚಳುವಳಿಯಲ್ಲಿ ಭಕ್ತಿ ಭಂಢಾರಿ ಅಣ್ಣ ಬಸವಣ್ಣನವರು, ಹಡಪದ ಅಪ್ಪಣ್ಣಾ, ಮೋಳಿಗೆ ಮಾಹಾರಾಯ,ಅಕ್ಕಮಹಾದೇವಿ, ಗಂಗಾಬಿಕೆ, ನೀಲಾಂಬಿಕೆ, ಸೋಳೆ ಸಂಕವ್ವ ,ಆಯ್ದಕ್ಕಿ ಲಕ್ಕಮ ಸೇರಿದಂತೆ ಅನೇಕ ಶರಣ -ಶರಣಿಯರು ಸಮ-ಸಮಾಜದ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದು ಉಪನ್ಯಾಸಕ ಶರಣ ಬಸಪ್ಪ ಕಾಂಬಳೆ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಬಸವರಾಜೇಂದ್ರ ದೇವಸ್ಥಾನದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷ್ಯತ್ತು ಮತ್ತು ಯುವ ಘಟಕ ತಾಲೂಕಾ ಮಹಿಳಾ ಕದಳಿ ವೇದಿಕೆ ಇಂಡಿ ಆಯೋಜಿಸಿದ ದತ್ತಿಧಾನಿಗಳಾದ ದಯಾನಂದ. ಚಂ ಸುರಪೂರ ಇವರ ಚಿರಂಜೀವಿ ಸಂದೇಶ.ದ ಸುರಪೂರ ಇವರ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಾಯಿ ನೀಲಮ್ಮಾ ಬಸವಣ್ಣನವರ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಸಹದರ್ಮಿಣಿಯಾಗಿ ಕಾರ್ಯ ಮಾಡುತ್ತಿದ್ದರು.
ದಾಸೋಹ ಮೋರ್ತಿಯಾದ ತಾಯಿ ನೀಲಮ್ಮ ಅತೀಥಿ ದೇವೋ ಭವ ಎನ್ನುವುಂತೆ ಅತಿಥಿ ಸತ್ಕಾರ ಸದಾ ನಿರತರಾಗಿರುತ್ತಿದ್ದರು. ಮನೆಗೆ ಬಂದ ಶರಣ ,ಶರಣಿಯರಿಗೆ ದಾಸೋಹ ಪ್ರಸಾದ ತಯಾರಿಸಿ ನೀಡುತ್ತಿದ್ದರು. ತಾಯಿ ನೀಲಮ್ಮ ಬಸವಣ್ಣನವರಿಗಿಂತ ಒಂದು ಕೈ ಮುಂದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಇದ್ದರು.
ಉದ್ಘಾಟನೆ ಹಾಗೂ ಸನ್ಮಾನ ಸ್ವೀಕರಿಸಿ ಎಸ್.ಎಸ್ ಈರನಕೇರಿ ಉಪನ್ಯಾಸಕರು ಶ್ರೀಶಾಂತೇಶ್ವರ ಮ.ಪಿ.ಯು.ಸಿ ಕಾಲೇಜ ಇಂಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆ ಪಾರ್ವತಿ ಸೋಮಶೇಖರ ಸುರಪೂರ , ಕದಳಿ ವೇದಿಕೆ ಅಧ್ಯಕ್ಷೆ ಗಂಗಾ .ಸಿ ಗಲಗಲಿ ದತ್ತಿ ಸ್ಮರಣೆ ಮಾಡಿದರು.
ಎಸ್.ಎಸ್ ಸುಗೂರ, ವಿಜಯಲಕ್ಷಿö್ಮÃ ಸಿ ದೇಸಾಯಿ, ದತ್ತಿಧಾನಿಗಳಾದ ಸೋಮಶೇಖರ ಸುರಪೂರ, ಶಾರದ ಸುರಪೂರ ವೇದಿಕೆಯಲ್ಲಿದ್ದರು. ರಾಜಶ್ರೀಕ್ಷತ್ರಿ, ನಿರ್ಮಲ ಹಂಜಗಿ, ಶಶೀಕಲಾ ಬೆಟಗೇರಿ, ರೀಯಾನ್ ಪಾಸ್ಟ್, ಧಾನಮ್ಮಾ ಹಿರೇಮಠ, ಶಶೀಕಲಾ ಮದಭಾವಿ, ಕಸ್ತೂರಿ ಬುರಕುಲೆ, ಪಾರ್ವತಿ ತಳವಾರ, ಶಕುಂತಲಾ ಕೂಡಗಿ ಸೇರಿದಂತೆ ಕದಳಿ ವೇದಿಕೆ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ರಾಜೇಶ್ವರಿ ಕ್ಷತ್ರಿ ಸ್ವಾಗತಿಸಿ, ಭವಾನಿ ಗುಳೇದಗುಡ್ಡ ನಿರೂಪಿಸಿ, ಶ್ರೀಮತಿ ಬಿ.ಎಚ್ ಪೊಲೀಸ್‌ಪಾಟೀಲ ವಂದಿಸಿದರು.
*
೧೨ನೇ ಶತಮಾನದಲ್ಲಿ ಅನೇಕ ಶರಣರು, ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾಗಿದರು. ಅವರಲ್ಲಿ ವಿಶಿಷ್ಠ ಪ್ರಮುಖ ಚಿಂತಕಿ, ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಾಂಬಿಕೆ , ಬಸವಣ್ಣನವರ ಮೋದಲ ಹೆಂಡತಿ ಗಂಗಾAಬಿಕೆ ಎರಡನೆ ಹೆಂಡತಿ ನೀಲಮ್ಮತಾಯಿ ಇವರ ವಚನದ ಅಂಕಿತ ನಾಮ ಸಂಗಯ್ಯ ಎಂದು ಇಟ್ಟುಕೊಂಡಿದ್ದಾರೆ.
ಶರಣಬಸಪ್ಪ .ಎನ್ ಕಾಂಬಳೆ, ಪತ್ರಕರ್ತ