Friday, 13th December 2024

Actor Yash: ʼಯಶ್‌‌, ಬೇಗ ಸಿನಿಮಾ ಮಾಡಿʼ ಶಾರುಖ್‌ ಖಾನ್‌ ಮನವಿ ವೈರಲ್!

sharukh khan yash

ಮುಂಬಯಿ: ಕನ್ನಡದ ನಟ, ಪ್ಯಾನ್‌ ಇಂಡಿಯಾ ಹೀರೋ ಯಶ್ (Actor Yash) ಮುಂದಿನ ಸಿನಿಮಾಗಳ ಕುರಿತು ಬಾಲಿವುಡ್‌ ಮಂದಿಗೂ ಕುತೂಹಲ ಇದೆ ಎಂಬುದು ಈ ವೈರಲ್ ವಿಡಿಯೋದಿಂದ (‌viral video) ರುಜುವಾತಾಗಿದೆ. ಶಾರುಖ್‌ ಖಾನ್‌ (Sharukh Khan) ಅವರ ಬರ್ತ್‌ಡೇ ಕಾರ್ಯಕ್ರಮದ ವಿಡಿಯೋ ಇದೆಂದು ಹೇಳಲಾಗಿದೆ.

ಶಾರುಖ್ ಖಾನ್ ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಇದನ್ನು ‘ಎಸ್​​ಆರ್​ಕೆ ಡೇ’ ಎಂದು ಆಚರಿಸಲಾಗಿದೆ. ಈ ವೇಳೆ ಯಶ್ ಅವರಿಗೆ ಶಾರುಖ್ ಖಾನ್ ವೇದಿಕೆಯಿಂದಲೇ ಒಂದು ಕಿವಿ ಮಾತು ಹೇಳಿದ್ದಾರೆ. ಶಾರುಖ್ ಖಾನ್ ಅವರಿಗೆ ಯಶ್‌ ಫ್ಯಾನ್ಸ್ ಕಡೆಯಿಂದ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಶಾರುಖ್‌ ಉತ್ತರ ನೀಡಿದ್ದಾರೆ. ‘ಯಶ್ ಬೇಗ ಬೇಗ ಸಿನಿಮಾ ಮಾಡಿ. ನಾವು ಕಾಯುತ್ತಿದ್ದೇವೆ’ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಈ ಮೂಲಕ ಯಶ್​ ಸಿನಿಮಾಗಳ ಮೇಲೆ ಶಾರುಖ್ ಖಾನ್​ಗೂ ನಿರೀಕ್ಷೆ ಇದೆ ಅನ್ನೋದು ಸ್ಪಷ್ಟವಾಗಿದೆ.

ಯಶ್‌ ಅವರ ಹವಾ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಬಾಲಿವುಡ್​ನಲ್ಲೂ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಈಗ ಯಶ್‌ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಅವರು ಬೇಗ ಬೇಗ ಸಿನಿಮಾ ಮಾಡಲಿ ಎಂಬುದು ಫ್ಯಾನ್ಸ್ ಕೋರಿಕೆ. ಈಗ ಶಾರುಖ್ ಖಾನ್ ಕೂಡ ಇದೇ ರೀತಿಯ ಬೇಡಿಕೆ ಇಟ್ಟಿದ್ದಾರೆ.

‘ಕೆಜಿಎಫ್’ ಮೊದಲ ಹಾಗೂ ಎರಡನೇ ಭಾಗಗಳಲ್ಲಿ ಯಶ್ ಅವರು ಹೀರೋ ಆಗಿ ನಟಿಸಿದ್ದರು. ಈ ಸಿನಿಮಾಗಳು ಸೂಪರ್ ಹಿಟ್ ಆಗಿದ್ದಲ್ಲದೆ ಯಶ್‌ ಅವರನ್ನು ಪ್ಯಾನ್‌ ಇಂಡಿಯಾ- ಪ್ಯಾನ್‌ ವರ್ಲ್ಡ್‌ ಸ್ಟಾರ್‌ ಆಗಿಸಿವೆ. ಎರಡನೇ ಚಿತ್ರ ಬಾಲಿವುಡ್​ನಲ್ಲೇ 500+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಬಾಲಿವುಡ್​ನಲ್ಲೂ ಯಶ್​ ಹವಾ ಸೃಷ್ಟಿ ಮಾಡಿದ್ದಾರೆ. ಈಗ ಶಾರುಖ್ ಖಾನ್ ಅವರು ‘ಟಾಕ್ಸಿಕ್’ ಬಗ್ಗೆ ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಯಶ್ ಮಾರುಕಟ್ಟೆ ವಿಸ್ತರಣೆ ಆಗಿದೆ. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಹಿಂದಿಯಲ್ಲೂ ಅವರು ಸಿನಿಮಾ ಮಾಡುತ್ತಿದ್ದಾರೆ. ಹಿಂದಿಯಲ್ಲಿ ‘ರಾಮಾಯಣ’ ಚಿತ್ರವನ್ನು ಯಶ್ ಮಾಡುತ್ತಿದ್ದಾರೆ. ಇದರಲ್ಲಿ ರಾವಣನ ಪಾತ್ರವನ್ನು ಯಶ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Actor Yash: ಮಗನ ಹುಟ್ಟುಹಬ್ಬದಂದು ಮಸ್ತ್‌ ಸ್ಟೆಪ್‌ ಹಾಕಿದ ಯಶ್‌; ರಾಧಿಕಾ ಪಂಡಿತ್‌ ಹಂಚಿಕೊಂಡ ಕ್ಯೂಟ್‌ ವಿಡಿಯೊ ಇಲ್ಲಿದೆ